ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆರೋಗ್ಯ ವೈದ್ಯ ಅಧಿಕಾರಿಗಳ ಕಚೇರಿಯಲ್ಲಿ ಇಂದ್ರಧನುಷ್ ಕಾರ್ಯಕ್ರಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದರು. ಜಯಂತ್, ಡಾ.ಟಿ. ರವಿಕುಮಾರ್, ಧರಣೇಶ್ ಇತರರು ಇದ್ದರು. 
ಜಿಲ್ಲೆ

ತಾಲೂಕಿನಲ್ಲಿ ಇಂದ್ರಧನುಷ್ ಯಶಸ್ವಿಗೊಳಿಸುವ ಗುರಿ

ಎಚ್.ಡಿ. ಕೋಟೆ: ಇಂದ್ರಧನುಷ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ತಾಲೂಕಿನಲ್ಲಿ ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಪೋಲಿಯೋ ಮುಕ್ತ ದೇಶಗಳಲ್ಲಿ ಒಂದಾಗಿದೆ. ಈ ಮಾನ್ಯತೆ ಹೀಗೆ ಮುಂದುವರಿಯಬೇಕಾದರೆ ನಾವು ಸಮಯಕ್ಕೆ ತಕ್ಕ ಲಸಿಕೆಗಳನ್ನು ಗರ್ಭಿಣಿಯರು ಮತ್ತು ಮಕ್ಕಳು ಪಡೆಯಬೇಕು. ತಾಲೂಕಿನಲ್ಲಿ ಹಾಡಿಗಳು ಹೆಚ್ಚಾಗಿದ್ದು, ಲಸಿಕೆಗೆ ಹೆದರುವ ಕಾರಣ ಅವರಿಗೆ ಧೈರ್ಯ ಹೇಳಿ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮತ್ತು ಇಬ್ಬರು ವೈದ್ಯರ ಮೇಲೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ತಾಲೂಕಿನಲ್ಲಿ ವೈದ್ಯರಿಂದ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಸೂಚಿಸಿದರು.
ಆರ್‌ಸಿಎಚ್ ಅಧಿಕಾರಿ ಜಯಂತ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಧರಣೇಶ್, ಸಾರ್ವಜನಿಕ ಆಡಳಿತಾಧಿಕಾರಿ ಸೋಮಣ್ಣ ಇದ್ದರು.