ಗೋಕರ್ಣ: ಇಲ್ಲಿನ ತಾರಮಕ್ಕಿ ಬಳಿ ಯುವಕನೋರ್ವನಿಂದ 1 ಕೆಜಿ 107 ಗ್ರಾಂ ಗಾಂಜಾವನ್ನು ಬುಧವಾರ ಸ್ಥಳೀಯ ಪಿಎಸ್ಐ ನವೀನ ನಾಯ್ಕ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶಂಕರ ಕೃಷ್ಣ ಗೌಡ ಎನ್ನುವ ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದರ ಮಾರಾಟಕ್ಕೆ ಬಳಸಲಾಗುತ್ತಿದ್ದ ಮೋಟರ್ಬೈಕ್ ಮತ್ತು ಎರಡು ಮೊಬೈಲ್ಗಳನ್ನು ಸಹ ಸೀಜ್ ಮಾಡಲಾಗಿದೆ. ಈ ವೇಳೆ ಪತ್ರಾಂಕಿತ ಅಧಿಕಾರಿಗಳಾದ ವಸಂತ ಹೆಗಡೆ, ಪಿಡಿಒ ವಿನಯಕುಮಾರ, ಕಂದಾಯ ಸಿಬ್ಬಂದಿ ಎಚ್. ಮಲ್ಲೇಶ, ಪೊಲೀಸ್ ಸಿಬ್ಬಂದಿ ರೂಪಾ ನಾಯಕ, ಸಚಿನ್ ನಾಯ್ಕ, ಶಿವಾನಂದ ಗೌಡ, ರಾಜೇಶ ನಾಯ್ಕ, ನಾಗರಾಜ ಪಟಗಾರ, ಜಿ.ಬಿ. ರಾಣೆ, ಅರವಿಂದ ಶೆಟ್ಟಿ, ಅರುಣ ಮುಕ್ಕಣ್ಣನವರ ಮತ್ತು ರವಿ ಹಾಡಕರ ಇದ್ದರು.