ಜಿಲ್ಲೆ

ತಾಯಿಂದಲೇ ಪುತ್ರನ ಅಪಹರಣ ಕಥೆ

ಕಲಬುರಗಿ: ನಗರದ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ಗರೀಬ್ ನವಾಜ್ ಕಾಲನಿಯಿಂದ ೧೧ ವರ್ಷದ ಬಾಲಕನನ್ನು ಅಪಹರಿಸಿ, ೨೨ ಲಕ್ಷ ರೂ.ಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಬಾಲಕ ತಾಯಿಯೇ ಹಣಕ್ಕಾಗಿ ಅಪಹರಣ ಕಥೆ ಕಟ್ಟಿದ್ದು, ತನಿಖೆಯಿಂದ ತಿಳಿದು ಬಂದಿದೆ ಎಂದು ಕಮೀಷನರ್ ಡಾ.ಶರಣಪ್ಪ ಎಸ್.ಡಿ. ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.೭ರಂದು ಬಾಲಕ ಸೈಯದ್ ಮಕ್ತಾರ್ ಹಾಶ್ಮಿ (೧೧) ಅಪಹರಕ್ಕೆ ಒಳಗಾಗಿದ್ದ. ತಾಯಿ ಅಂಜುಮ್ ಸಮೀನಾ ಕೇಸ್ ನೀಡಿದ್ದಲ್ಲದೇ ಮನೆ ಮುಂದೆ ಇಂಗ್ಲಿಷ್‌ನಲ್ಲಿ ಚೀಟಿ ಬರೆದು, ೨೨ ಲಕ್ಷಕ್ಕೆ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದ್ದಳು. ಆದರೆ ತನಿಖೆ ವೇಳೆ ಚೀಟಿಯಲ್ಲಿ ಬರೆದಿದ್ದು ಆಕೆಯ ನಾದಿನಿಯ ಪುತ್ರನ ಹೆಸರು ಎಂಬುದು ತಿಳಿಯಿತು. ನಾದಿನಿಯ ಬಳಿ ಹಣ ಇರುವ ಮಾಹಿತಿ ಅರಿತು, ನಿನ್ನ ಪುತ್ರನ ಬದಲಾಗಿ, ನನ್ನ ಪುತ್ರನ ಅಪಹರಣ ಆಗಿದೆ. ಸಹಾಯ ಮಾಡು ಎಂದು ಕೇಳುವ ಯೋಚನೆ ಮಾಡಿ, ಅವಳಿಂದ ಹಣಕ್ಕೆ ವಸೂಲಿ ಮಾಡಲು ಹೊಂಚು ಹಾಕಿದ್ದಳು. ಕೇಸ್ ಮಾಡಲು ಸಹ ಹಿಂದೇಟು ಸಂಬAಧಿಕರಿಗೆ ಬೇಡ ಎಂದು ಒತ್ತಾಯಿಸಿದ್ದಳು. ವಿಚಾರಣೆ ನಡೆಸಿದ್ದಾಗ ಗೊಂದಲದ ಹೇಳಿಕೆ ನೀಡಿದ್ದು, ಅನುಮಾನ ಮೂಡಿಸಿತ್ತು. ಪುತ್ರನನ್ನು ರಾಜಿಕ್, ಮೊಬೀನ್ ಜತೆಗೆ ಪುಣೆಗೆ ಕಳುಹಿಸಿದ್ದಳು. ತಾಯಿ, ಅಪಹರಣ ಕಥೆಗೆ ಸಹಾಯ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.