ದಿಗ್ಗೇವಾಡಿ ಗ್ರಾಮದಲ್ಲಿ ಜಲಾವೃತಗೊಂಡ ಮನೆಗಳನ್ನು ಶಾಸಕ ಡಿ.ಎಂ.ಐಹೊಳೆ ವೀಕ್ಷಿಸಿದರು. ಸುನೀತಾ ಪಾಟೀಲ, ಬಸವರಾಜ ಡೊಣವಾಡೆ, ಭೀಮಗೌಡ ಪಾಟೀಲ, ಅಣ್ಣಾಸಾಹೇಬ ಖೇಮಲಾಪುರೆ, ಸದಾಶಿವ ಘೋರ್ಪಡೆ ಇತರರಿದ್ದರು. 
ಜಿಲ್ಲೆ

ತಾತ್ಕಾಲಿಕವಾಗಿ 10 ಸಾವಿರ ರೂ. ಪರಿಹಾರ

ರಾಯಬಾಗ, ಬೆಳಗಾವಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ದಿಗ್ಗೇವಾಡಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಸಂಸತ್ರಸ್ತರಿಗೆ ಸರ್ಕಾರದಿಂದ ತಾತ್ಕಾಲಿಕವಾಗಿ 10 ಸಾವಿರ ರೂ. ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಜಲಾವೃತಗೊಂಡ ಮನೆಗಳಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಮಳೆಯಿಂದ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ತಾತ್ಕಾಲಿಕವಾಗಿ ವಾಸಿಸಲು ಮತ್ತು ಊಟದ ವ್ಯವಸ್ಥೆವನ್ನು ತಾಲೂಕು ಆಡಳಿತದಿಂದ ಮಾಡಲಾಗಿದೆ ಎಂದರು.

ತಹಸೀಲ್ದಾರ್ ಭೇಟಿ: ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಯಾಗಿರುವ ಸ್ಥಳಗಳಿಗೆ ತಹಸೀಲ್ದಾರ್ ಆರ್.ಎಚ್.ಬಾಗವಾನ್ ಭೇಟಿ ನೀಡಿ, ಹಾನಿ ಬಗ್ಗೆ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸಂತ್ರಸ್ತರಿಗೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಲಾಗುತ್ತದೆ ಎಂದರು. ಗ್ರಾಪಂ ಅಧ್ಯಕ್ಷೆ ಸುನೀತಾ ಪಾಟೀಲ, ಬಸವರಾಜ ಡೊಣವಾಡೆ, ಭೀಮಗೌಡ ಪಾಟೀಲ, ಅಣ್ಣಾಸಾಹೇಬ ಖೇಮಲಾಪುರೆ, ಸದಾಶಿವ ಘೋರ್ಪಡೆ, ಶಾಂತಾ ಕಾಂಬಳೆ, ಶೇಖರ ಕಾಂಬಳೆ, ಉಮೇಶ ಕಾಂಬಳೆ, ಶಿವಪುತ್ರ ಸಲಗರೆ, ಕರೆಪ್ಪ ಪೂಜಾರಿ ಇತರರಿದ್ದರು.