ಮಾವಿನಕಟ್ಟೆ ನಿರಾಶ್ರಿತ ಪ್ರಶಾಂತ್ ಅವರಿಗೆ ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟ ಗಬ್ಗಲ್ ಯುವ ಗೆಳೆಯರ ಬಳಗದ ಸದಸ್ಯರು. ಗಣೇಶ್, ಮಂಜುನಾಥ್, ಮಂಜುನಾಥ್, ಅನಿಲ್ ಮೊಂತೆರೊ ಇತರರಿದ್ದರು. 
ಜಿಲ್ಲೆ

ತಾತ್ಕಾಲಿಕ ಸೂರು ನಿರ್ಮಾಣ

ಬಣಕಲ್: ಗಬ್ಗಲ್ ಯುವ ಗೆಳೆಯರ ಬಳಗದ ಯುವಕರು ಸೇರಿ ನಿರಾಶ್ರಿತ ಪ್ರಶಾಂತ್ ಅವರಿಗೆ ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮಾವಿನಕಟ್ಟೆ ಪ್ರಶಾಂತ್ ಅವರ ಮನೆ ಮಳೆಯಿಂದ ಕುಸಿದಿದ್ದರಿಂದ ಟಾರ್ಪಾಲ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಅವರ ಸ್ಥಿತಿ ಕುರಿತು ಸ್ಥಳೀಯರು ಗಬ್ಗಲ್ ಯುವಕರ ಬಳಗಕ್ಕೆ ಮಾಹಿತಿ ನೀಡಿದ್ದು, ಬಳಗದ ಯುವಕರು ಮನೆ ಕುಸಿದ ಜಾಗದಲ್ಲಿ ಸಿಮೆಂಟ್ ಶೀಟ್ ಹಾಕಿ ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟರು.
ಕಸಾಪ ಜಿಲ್ಲಾ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಒಂದು ವರ್ಷದಿಂದ ಯುವ ಗೆಳೆಯರ ಬಳಗದ 35 ಸದಸ್ಯರು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಕೆಲ ತಿಂಗಳ ಹಿಂದೆ ತಲಗೂರಿನ ರಾಮ ಎಂಬುವರಿಗೆ ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟಿದ್ದರು ಎಂದರು.
ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್, ಕಸಾಪ ಸಂಚಾಲಕ ವಸಂತ್ ಹಾರ್ಗೋಡು, ಗಾಯಕರಾದ ಬಕ್ಕಿ ಮಂಜುನಾಥ್, ಅನಿಲ್ ಮೊಂತೆರೊ ಇದ್ದರು.