ಜಿಲ್ಲೆ

ತಾತ್ಕಾಲಿಕ ಮೀನು ಮಾರುಕಟ್ಟೆ ತೆರೆಯಲು ಆಗ್ರಹ

ಕಾರವಾರ: ನಗರದ ಟ್ಯಾಗೋರ್ ಕಡಲ ತೀರದಲ್ಲಿ ಇರುವ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ತೆರೆಯುವಂತೆ ಮೀನುಗಾರ ಮಹಿಳೆಯರು ಒತ್ತಾಯಿಸಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಬಂದ್ ಮಾಡಿದ ಮಾರುಕಟ್ಟೆಯನ್ನು ಇದುವರೆಗೂ ತೆರೆದಿಲ್ಲ. ಈಗ ದೇವಸ್ಥಾನ, ಹೋಟೆಲ್ ಸೇರಿ ಎಲ್ಲವನ್ನೂ ಮತ್ತೆ ತೆರೆಯಲಾಗಿದೆ. ಆದರೆ, ಮೀನು ಮಾರುಕಟ್ಟೆಗೆ ಮಾತ್ರ ನಗರಸಭೆ ಬೀಗ ಹಾಕಿಕೊಂಡೇ ಇಟ್ಟಿದೆ.

ರಸ್ತೆ ಬದಿಯಲ್ಲಿ ಮಳೆಯಲ್ಲಿ, ಕುಳಿತು ಮೀನು ಮಾರಾಟ ಕಷ್ಟವಾಗುತ್ತಿದೆ. ಹೊಸ ಮೀನು ಮಾರುಕಟ್ಟೆಯಲ್ಲಿ ಎಲ್ಲ ಮೀನುಗಾರರಿಗೆ ಅವಕಾಶ ಸಿಗುತ್ತಿಲ್ಲ ಇದರಿಂದ ಮೂರು ವರ್ಷಗಳಿಂದ ಬಳಸಿಕೊಂಡು ಬಂದ ಹಳೆಯ ಮಾರುಕಟ್ಟೆಯನ್ನೇ ಮತ್ತೆ ಬಳಕೆಗೆ ನೀಡಬೇಕು ಎಂದು ಅಧ್ಯಕ್ಷೆ ಸುಶೀಲಾ ಹರಿಕಂತ್ರ ನೇತೃತ್ವದಲ್ಲಿ ಮಹಿಳೆಯರು ಸೋಮವಾರ ತಾತ್ಕಾಲಿಕ ಮಾರುಕಟ್ಟೆಗೆ ತೆರಳಿ ಒತ್ತಾಯಿಸಿದ್ದಾರೆ.</