ಬೆಳಗಾವಿ: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ ಮತ್ತು ಹೊಸ ವಿಚಾರ ಬೆಳೆಸುವಲ್ಲಿ ಇಂಡಕ್ಷನ್ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಐಇಇಇ(ಇನ್ಸ್ಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್) ಎನ್ಕೆಎಸ್ಎಸ್ ಅಧ್ಯಕ್ಷ ಡಾ.ವಿರೂಪಾ ದಲಾಲ್ ಅಭಿಪ್ರಾಯ ಪಟ್ಟರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಈಚೆಗೆ ಆಯೋಜಿಸಿದ್ದ ಐಇಇಇ ವಿದ್ಯಾರ್ಥಿ ಶಾಖೆಯ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಮಾತನಾಡಿದರು. ಕಾಲೇಜಿನ ಐಇಇಇ ಶಾಖೆಯ ಕೌನ್ಸಿಲರ್ ಡಾ. ಅರವಿಂದ ಜಾಧವ, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀರಾಮ ಕುಲಕರ್ಣಿ, ಡಾ.ಧನಶ್ರೀ ಕುಲಕರ್ಣಿ, ಡಾ.ಪೂಜಾ ಅನಗೋಳಕರ ಇತರರಿದ್ದರು.