ಬಾಗಲಕೋಟೆ ತಾಲೂಕಿನ ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಬುಧವಾರ ಬಾಗಲಕೋಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಗದ್ದನಕೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಶಾಸಕ ಜೆ.ಟಿ.ಪಾಟೀಲ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ್, ಬಾಗಲಕೋಟೆ ತಹಸೀಲ್ದಾರ ಅಮರೇಶ ಪಮ್ಮಾರ, ಗ್ರೇಡ್-೨ ತಹಸೀಲ್ದಾರ ಮಲ್ಲನಗೌಡ ಬಿರಾದಾರ್, ಗ್ರಾ.ಪಂ. ಅಧ್ಯಕ್ಷ ವೆಂಕಟೇಶ ಹಿರೇಮಠ, ಉಪಾಧ್ಯಕ್ಷೆ ಜಯಶ್ರೀ ದೊಡಮನಿ, ತಾ.ಪಂ. ಇ.ಒ. ಸುಭಾಸ ಸಂಪಗಾವಿ ಇತರರು ಇದ್ದರು.  
ಜಿಲ್ಲೆ

ತಾಂಡಾಗಳು ಇನ್ನು ಮುಂದೆ ಕಂದಾಯ ಗ್ರಾಮ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಸರ್ಕಾರ ಬಹುದಿನಗಳ ಕನಸುಗಳ ಸಾಕಾರಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ, ಜಿಲ್ಲೆಯ ಎಲ್ಲಾ ತಾಂಡಾಗಳು ಇನ್ನು ಮುಂದೆ ಕಂದಾಯ ಗ್ರಾಮಗಳಾಗಲಿವೆ ಎಂದು ಹಟ್ಟಿ ಚಿನ್ನದ ಗಣಿ ನಿ.ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ್ ಹೇಳಿದರು.

ತಾಲೂಕಿನ ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಬುಧವಾರ ಬಾಗಲಕೋಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಗದ್ದನಕೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಂಡಾ ಅಭಿವೃದ್ಧಿಗಾಗಿ ಎರಡು ಎಕರೆ ಜಮೀನು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಮಾಸಾಶನ, ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರಿ ಮಾತನಾಡಿದರು.

ಇನ್ನು ಮುಂದೆ ಪ್ರತಿ ಗ್ರಾಮಗಳಿಗೆ ಹಾಗೂ ಪಟ್ಟಣ ಪ್ರದೇಶಗಳಿಗೆ ದೊರಕಬಹುದಾದ ಎಲ್ಲ ಸೌಲಭ್ಯಗಳು ತಾಂಡಾಗಳಿಗೆ ದೊರೆಯಲಿವೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳ ಜಮೀನು ಪೋಡಿ ಮುಕ್ತಾಯವಾಗಲಿದ್ದು, ಒತ್ತುವರಿ ಆಕ್ರಮಿಸಿಕೊಳ್ಳುವ ಯಾವ ಕಾರ್ಯಗಳು ನಡೆಯುವುದಿಲ್ಲ ಎಂದರು.

ಅಽಕಾರಿಗಳು ರೈತರು ತಮ್ಮ ಜಮೀನಿಗೆ ಸಂಬAಽಸಿದ ಯಾವುದೇ ಕೆಲಸಗಳಿಗೆ ಬಂದಾಗ, ವಿಳಂಬ ಮಾಡದೇ ಗೌರವದಿಂದ ಅವರ ಕೆಲಸ ಮಾಡಿಕೊಡಬೇಕು. ಹಿಂದಿನAತೆ ಇಂದು ತಾಂಡಾಗಳು ಇಲ್ಲ, ಪ್ರತಿಯೊಬ್ಬರೂ ಸುಧಾರಣೆಗೊಳ್ಳುತ್ತಿದ್ದಾರೆ. ಕೇವಲ ಮನೆ, ವಾಹನಗಳಿಂದ ಸುಧಾರಿಸದೇ ಪ್ರತಿಯೊಬ್ಬ ತಂದೆ ತಾಯಿಯರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಇಂದು ನಿಮ್ಮ ಗ್ರಾಮದ ಯಶವಂತ ರಾಥೋಡ ಇಲ್ಲಿಯ ಗ್ರಂಥಾಲಯ ಅಭಿವೃದ್ಧಿಗಾಗಿ ಒಂದು ಲಕ್ಷ ಹಣ ನೀಡಿದ್ದಾರೆ, ಇದರಿಂದ ಇನ್ನು ಮುಂದೆ ನಿಮ್ಮ ತಾಂಡಾ ಸುಧಾರಿಸಲಿದೆ ಎಂದು ಹೇಳಿದರು.

ಉಪವಿಭಾಗಾಽಕಾರಿ ಸಂತೋಷ ಜಗಲಾಸರ್ ಮಾತನಾಡಿ, ಗದ್ದನಕೇರಿ ತಾಂಡಾದ ಒಟ್ಟು ೪೭೮ ಫಲಾನುಭವಿಗಳು ಹಕ್ಕುಪತ್ರ ಪಡೆದಿದ್ದಾರೆ. ಸರ್ವೇ ಪೂರೈಸಿದ ಫಲಾನುಭವಿಗಳು ೪೪೮, ಜಿ.ಪಿ.ಎಸ್.ಪೂರೈಸಿದ ಫಲಾನುಭವಿಗಳು ೪೪೮ ಇದ್ದು, ಸರ್ಕಾರಕ್ಕೆ ಶುಲ್ಕ ಪಾವತಿ ಮಾಡಿದ ೩೬೦ ಜನರಿದ್ದು, ಸದ್ಯ ಹಕ್ಕುಪತ್ರ ಪಡೆದುಕೊಳ್ಳುತ್ತಿರುವವರ ಸಂಖ್ಯೆ ೧೮೫ ಇದೆ. ಬಾಕಿ ಇರುವ ಮತ್ತು ಇನ್ನೂ ಸರ್ವೆ ಮಾಡದ ಫಲಾನುಭವಿಗಳು ೩೦ ಜನರಿದ್ದಾರೆ ಎಂದರು.

ಕಲಾದಗಿ ಹೋಬಳಿ ವ್ಯಾಪ್ತಿಯ ಖಜ್ಜಿಡೋಣಿ, ಶಾರದಾಳ, ತುಳಸೀಗೇರಿ, ಗೋವಿಂದಕೊಪ್ಪ, ಯಡಹಳ್ಳಿ, ಛಬ್ಬಿ, ಸಿಂದಗಿ, ಸೋರಕೊಪ್ಪ, ಹೊನ್ನರಹಳ್ಳಿ, ಗದ್ದನಕೇರಿ ಗ್ರಾಮಗಳ ಜನರಿಗೆ ಪಾವತಿ ಖಾತಾ ಮಾಡಿದ ಪಹಣಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಬಾಗಲಕೋಟೆ ತಹಸೀಲ್ದಾರ ಅಮರೇಶ ಪಮ್ಮಾರ, ಗ್ರೇಡ್-೨ ತಹಸೀಲ್ದಾರ ಮಲ್ಲನಗೌಡ ಬಿರಾದಾರ್, ಗ್ರಾ.ಪಂ. ಅಧ್ಯಕ್ಷ ವೆಂಕಟೇಶ ಹಿರೇಮಠ, ಉಪಾಧ್ಯಕ್ಷೆ ಜಯಶ್ರೀ ದೊಡಮನಿ, ತಾ.ಪಂ. ಇ.ಒ. ಸುಭಾಸ ಸಂಪಗಾವಿ, ಮುಖಂಡರಾದ ಶಿವು ರಾಠೋಡ, ಸಿದ್ದಣ್ಣ ಛಬ್ಬಿ, ಜಿ.ಪಂ.ಮಾಜಿ ಸದಸ್ಯ ಪಾಂಡು ಪೊಲೀಸ್, ವಿಠ್ಠಲ್ ಲಮಾಣಿ, ಮಾನಪ್ಪ ಲಮಾಣಿ, ಬಿ.ಟಿ.ಡಿ.ಎ. ಸಹಾಯಕ ಅಭಿಯಂತರ ಸೋಮಲಿಂಗಪ್ಪ ನೋಟಗಾರ್, ಚಂದ್ರು ಕುರಿ, ಸಿದ್ದಣ್ಣ ಜಕ್ಕನಗೌಡರ್ ಸೇರಿದಂತೆ ಇತರರು ಇದ್ದರು.