ಬಾಗಲಕೋಟೆ ನಗರದ ವಿದ್ಯಾಗಿರಿಯ ಮಹಿಳಾ ಪ್ರಮುಖರು ಮಾಜಿ ಸಚಿವ ಎಚ್.ವೈ.ಮೇಟಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಪ್ರಮುಖರಾದ ಪ್ರದೀಪ ಜಾಧವ, ಕಿರಣಕುಮಾರ ನಾಯಕ, ಅಜಯಕುಮಾರ ಬಿಲವಾಡ, ರವಿ ರಡ್ಡಿ, ಮುತ್ತಣ್ಣ, ಅನೀಲ ಕುಂದಗೋಳ, ಎಚ್.ಎಸ್. ನಾಡಗೌಡ, ಸುಷ್ಮಾ ಜಾಧವ, ಈರಮ್ಮ ಗೌಡರ, ಸೀಮಾ ಮಮದಾಪುರ, ಸುಮಾ ಬಿರಾದಾರ, ಅಕ್ಕಮಹಾದೇವಿ ಗೌಡರ ಇದ್ದರು. 
ಜಿಲ್ಲೆ

ತಾಂಡಾಗಳ ಅಭಿವೃದ್ಧಿಗೆ ಶ್ರಮಿಸುವೆ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಕಳೆದ ಬಾರಿ ನಾನು ಶಾಸಕ, ಸಚಿವರಾಗಿ ಸೇವೆ ಸಲ್ಲಿಸುವಾಗ ಮುಚಖಂಡಿಯ ತಾಂಡಾದ ಜನರ ಜಾಗದ ಸಮಸ್ಯೆ ಹಾಗೂ ದೇವಸ್ಥಾನದ ಕೆಲಸಗಳು ಮಾಡಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಗೆದ್ದು ತಾಂಡಾಗಳಲ್ಲಿ ಅಭಿವೃದ್ಧಿಗೆ ಬೇಕಾಗಿರುವ ಎಲ್ಲ ರೀತಿಯ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವ ಎಚ್.ವೈ.ಮೇಟಿ ಹೇಳಿದರು.
ನವನಗರದ ಸೆಕ್ಟರ್ ನಂ.೫೨ರಲ್ಲಿರುವ ಗೃಹ ಕಚೇರಿಯಲ್ಲಿ ಎಚ್.ವೈ. ಮೇಟಿ ಅವರ ನೇತೃತ್ವದಲ್ಲಿ ಮುಚಖಂಡಿ ಎಲ್‌ಟಿ-೧ ಮತ್ತು ಎಲ್‌ಟಿ-೨ರ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
ನಗರದ ಸುತ್ತಮೂತ್ತಲಿನ ತಾಂಡಾಗಳಲ್ಲಿ ನನ್ನ ಸಂಪರ್ಕ ಕಡಿಮೆ ಇದ್ದರೂ, ನಾನು ಹುಟ್ಟಿನಿಂದ ತಾಂಡಾದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಹಾಗಾಗಿ ತಾಂಡಾದ ಜನರು ನಮ್ಮ ಮನೆಯವರಂತೆ ಇದ್ದಾರೆ. ಅವರ ಅಭಿವೃದ್ಧಿಗೆ ನಾನು ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಸುತ್ತಮೂತ್ತಲಿನ ತಾಂಡಾಗಳಲ್ಲಿಯೂ ಅಭಿವೃದ್ಧಿ ಮಾಡಿದ್ದೇನೆ. ಆದರೆ, ಈಗಿನ ಸರ್ಕಾರ ಏನೇನು ಮಾಡಿದೆ ಗೊತ್ತಿಲ್ಲ. ಅವರು ಅಭಿವೃದ್ಧಿ ಮಾಡದಿದ್ದರೂ ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ತಾಂಡಾದಲ್ಲಿನ ಸಮಸ್ಯೆಗಳು ಬಗೆಹರಿಯದಂತಹ ಸಮಸ್ಯೆಗಳಲ್ಲ. ಎಲ್ಲವೂ ಬಗೆಹರಿಯುತ್ತವೆ. ಈಗ ನನಗೆ ಸಮಸ್ಯೆಗಳನ್ನು ಬಗೆಹರಿಸುವ ಅಽಕಾರವಿಲ್ಲ. ಅದೆಲ್ಲವು ಅಽಕಾರದಲ್ಲಿರುವಾಗ ಮಾಡಲು ಸಾಧ್ಯ. ತಾಂಡಾಗಳಲ್ಲಿರುವ ಸಮಸ್ಯೆಗಳು ನಮ್ಮ ಪಕ್ಷದ ಹಿರಿಯ ಮುಖಂಡರಿಗೆ ಗಮನಕ್ಕೆ ತರುತ್ತೇನೆ. ಈಗಾಗಲೇ ಬಾಗಲಕೋಟೆ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ನನಗೆ ಟಿಕೆಟಿ ನೀಡಿ ಹೆಸರು ಘೋಷಿಸಿದೆ. ಈ ಬಾರಿ ನೀವು ನನಗೆ ಮತ್ತೊಮ್ಮೆ ಬೆಂಬಲಿಸುವ ಮೂಲಕ ಗೆಲ್ಲಿಸಿ, ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ಮುಖಂಡರಾದ ಮುತ್ತು ಜೋಳದ, ಬರಮು ಪೂಜಾರಿ, ಸಿದ್ದಣ್ಣ ಗೋಡಿ, ನಿಂಗನಗೌಡ ಪಾಟೀಲ, ರಾಜು ಇಲ್ಯಾಳ, ಪುನೀತ ಹರಳಿ, ಮಹೇಶ ಹಿರೇಮಠ, ರಾಜು ಮನ್ನಿಕೇರಿ, ದ್ಯಾಮಣ್ಣ ಗಾಳಿ, ಥಾವರಪ್ಪ ಲಮಾಣಿ, ನಿಂಗಪ್ಪ ಚವ್ಹಾಣ, ಶಂಕರ ರಾಠೋಡ, ನೇಮಪ್ಪ ರಾಠೋಡ, ದಿಲೀಪ ರಾಠೋಡ, ಮಲ್ಲು ಲಮಾಣಿ, ರಾಜು ಲಮಾಣಿ, ಪ್ರಭು ಲಮಾಣಿ, ಕುಮಾರ ಲಮಾಣಿ, ಆನಂದ ರಾಠೋಡ ಮುಂತಾದವರು ಉಪಸ್ಥಿತರಿದ್ದರು.