ಜಿಲ್ಲೆ

ತಾಂಡಾಗಳ ಅಭಿವೃದ್ಧಿಗೆ ಆದ್ಯತೆ ನೀಡಿ

Kalaburagi

ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿರುವ ತಾಂಡಾಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಬಂಜಾರ ಸಮಾಜದ ಮುಖಂಡ ಬಹಾದ್ದೂರ್ ರಾಠೋಡ್ ಒತ್ತಾಯಿಸಿದರು.
ಶಾಸಕ ಡಾ. ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಿದ ಅವರು, ಶಾಸಕರು ಈಗಾಗಲೇ ಹಲವು ಯೋಜನೆಗಳಡಿ ತಾಂಡಾಗಳಿಗೆ ಅನುದಾನ ನೀಡಿದ್ದಾರೆ. ಆದರೂ ಸಮರ್ಪಕವಾಗಿ ಅಭಿವೃದ್ಧಿ ನಡೆದಿಲ್ಲ. ಇನ್ನು ಸರಿಯಾದ ರಸ್ತೆಗಳಿಲ್ಲ, ನೀರಿನ ಸಮಸ್ಯೆ ದೂರವಾಗಿಲ್ಲ. ಅಸ್ವಚ್ಛತೆಯ ವಾತಾವರಣವಿದೆ. ಹೀಗಾಗಿ ತಾಂಡಾಗಳ ಅಭಿವೃದ್ಧಿ ನಿಗಮದಡಿ ಸಮರ್ಪಕ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ದಿ ಪಡಿಸಬೇಕು ಎಂದು ಕೋರಿದರು.
ಪ್ರಮುಖರಾದ ತುಕಾರಾಮ ಚವ್ಹಾಣ್, ತುಳಜಾರಾಮ ರಾಠೋಡ್, ಪಂಡಿತ ಪವಾರ್, ಹೇಮು ಚವ್ಹಾಣ್, ಉಮ್ಮಾಜಿ ರಾಠೋಡ್, ಜಯರಾಮ ರಾಠೋಡ್, ಬಸವರಾಜ ಪವಾರ್, ಚಂದು ಚವ್ಹಾಣ್, ಗೇನಿ ರಾಠೋಡ್, ಡಾ.ಶಿವರಾಜ ರಾಠೋಡ್, ಜಾನು ರಾಠೋಡ್, ಗಂಗಾರಾಮ ಚವ್ಹಾಣ್, ಮನ್ನು ಚವ್ಹಾಣ್, ಗುಂಡು ಚವ್ಹಾಣ್ ಇದ್ದರು.