ಚಿತ್ರದುರ್ಗ: ಪದೆ ಪದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗುವ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯತೋರಿದ ಆರೋಪದಡಿ ಮೊಳಕಾಲ್ಮೂರು ತಾಪಂ ವ್ಯವಸ್ಥಾಪಕ ಅರುಣ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.
ಅರುಣ್‌ಕುಮಾರ್ ಕಳೆದ ಆಗಸ್ಟ್ 8ರಿಂದ 13ರವರೆಗೆ ಅನಧಿಕೃತ ಗೈರು ಹಾಜರಾಗಿದ್ದು, ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೂ ಆಗಸ್ಟ್ 14ರಿಂದ 21ರವರೆಗೆ ಮತ್ತೆ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ. ಮೇಲಾಧಿಕಾರಿ ಅನುಮತಿ ಪಡೆಯದೇ ಗೈರು ಹಾಜರಾಗಿರುವುದರಿಂದ ಈ ನೌಕರನ ವಿರುದ್ಧ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ತಾಪಂ ಇಒ ವರದಿ ಸಲ್ಲಿಸಿದ್ದರು.