ಚಾಮರಾಜನಗರ: ತಾಲೂಕು ಪಂಚಾಯತಿ ನೂತನ ಕಾರ್ಯನಿರ್ವಾಹಕರಾಗಿ ಆಧಿಕಾರ ವಹಿಸಿಕೊಂಡ ಪಿ.ಶ್ರೀನಿವಾಸ ಅವರನ್ನು ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಗರದ ತಾ.ಪಂ.ಕಚೇರಿಯಲ್ಲಿ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಅವರ ನೇತೃತ್ವದಲ್ಲಿ ಪಿ.ಶ್ರೀನಿವಾಸ ಅವರಿಗೆ ಶಾಲು ಹೊದಿಸಿ ಹಾರಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ, ಜಿ.ಎಂ.ಶಂಕರ್, ಮಾಜಿ ಗ್ರಾ.ಪಂ.ಅಧ್ಯಕ್ಷ ದೇಮಳ್ಳಿ ಶಿವಮಲ್ಲಪ್ಪ, ಕೊತ್ತಲವಾಡಿ ಪುಟ್ಟಲಿಂಗಯ್ಯ, ಕೆಂಪರಾಜು ಪುನೀತ್ ಇತರರು ಹಾಜರಿದ್ದರು.