ಹೊಳೆಹೊನ್ನೂರಿನ ಗೊಬ್ಬರ ಮಾರಾಟ ಕೇಂದ್ರಗಳಿಗೆ ತಹಸೀಲ್ದಾರ್ ಪರುಶಪ್ಪ ಕುರುಬರ್ ಅವರ ತಂಡ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿತು. ಎಸ್.ವಿಜಯ್, ಎಸ್.ರಾಜು, ರಾಮಪ್ಪ ಇತರರಿದ್ದರು. 
ಜಿಲ್ಲೆ

ತಹಸೀಲ್ದಾರ್‌ರಿಂದ ಗೊಬ್ಬರ ಮಾರಾಟ ಕೇಂದ್ರ ಪರಿಶೀಲನೆ

ಹೊಳೆಹೊನ್ನೂರು: ರಾಜ್ಯದ ಕೆಲವೆಡೆಗಳಲ್ಲಿ ಗೊಬ್ಬರದ ಅಭಾವ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪರುಶಪ್ಪ ಕುರುಬರ್ ಅವರು ಪಟ್ಟಣದ ಗೊಬ್ಬರ ಮಾರಾಟ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದರು.

ಈ ಭಾಗದ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಭತ್ತದ ನಾಟಿ, ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆ ಆಗಿದ್ದು ರೈತರಿಗೆ ಗೊಬ್ಬರದ ಅವಶ್ಯಕತೆ ಇದೆ. ಆದರೆ ಈ ಬಾರಿ ಸಕಾಲದಲ್ಲಿ ಗೊಬ್ಬರ ಸಿಗದೆ ಜಮೀನಿನಲ್ಲಿ ಕೆಲಸ ಬಿಟ್ಟು ಗೊಬ್ಬರಕ್ಕಾಗಿ ಅಲೆದಾಡುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಎಲ್ಲ ಗೊಬ್ಬರ ಮಾರಾಟ ಮಳಿಗೆಗಳಿಗೆ ಅಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗೊಬ್ಬರ ಸರಬರಾಜು, ವಿತರಣೆ ಹಾಗೂ ದಾಸ್ತಾನು ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಸ್ಥಳೀಯ ರೈತರಿಗೆ ಮೊದಲು ಗೊಬ್ಬರ ನೀಡಿ ಉಳಿದಲ್ಲಿ ಜಿಲ್ಲೆಯ ಇತರ ತಾಲೂಕಿನ ರೈತರಿಗೆ ನೀಡಬೇಕು. ಆಧಾರ್ ಕಾರ್ಡ್ ಪರಿಶೀಲನೆ ನಡೆಸಿ ನಿಗದಿತ ಬೆಲೆಗೆ ಮಾರಾಟ ಮಾಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದ ಅವರು, ನಿರ್ವಹಣೆ ಮಾಡದವರಿಗೆ ನೋಟಿಸ್ ನೀಡುವಂತೆ ಸಹಾಯಕ ಕೃಷಿ ಅಕಾರಿ ರಾಮಪ್ಪ ಅವರಿಗೆ ಸೂಚಿಸಿದರು.

ಉಪತಹಸೀಲ್ದಾರ್ ಎಸ್.ವಿಜಯ್, ರಾಜಸ್ವ ನಿರೀಕ್ಷಕ ಎಸ್.ರಾಜು, ಸಹಾಯಕ ಕೃಷಿ ಅಕಾರಿ ರಾಮಪ್ಪ, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಅಣ್ಣಪ್ಪ ಸ್ವಾಮಿ ಇದ್ದರು.