ಚಳ್ಳಕೆರೆ(ಚಿತ್ರದುರ್ಗ):ನಗರದ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ತಹಸೀಲ್ದಾರ್ ರೆಹನ್‌ಪಾಶಾ ಅವರ ಸರ್ಕಾರಿ ವಾಹನಕ್ಕೆ(ಕೆಎ16 ಎ 0606ಬೋ ಲೆರೋ)ಯುವಕನೊಬ್ಬ ಬೆಂಕಿ ಹಚ್ಚಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ತಹಸೀಲ್ದಾರ್ ಅವರು ಎಂದಿನಂತೆ ಕಚೇರಿಗೆ ಆಗಮಿಸಿದ ನಂತರ ಈ ಘಟನೆ ನಡೆದಿದ್ದು, ಆರೋಪಿಯನ್ನು ನಗರದ ಡಿಪ್ಲೊಮಾ ವಿದ್ಯಾರ್ಥಿ ಪ್ರಥ್ವಿರಾಜ್(25) ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆ ದು ವಿಚಾರಣೆ ಮುಂದುವರಿಸಿದ್ದಾರೆ. ವಾಹನದ ಮುಂಭಾಗದ ಬಾನೆಟ್ ಸುಟ್ಟಿದೆ. ಡಿವೈಎಸ್‌ಪಿ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಾಹನಕೆ ಬೆಂಕಿ ಹಚ್ಚಿದ ಆರೋಪಿ ಜುಲೈ 28ರಂದು ತನ್ನ ತಾಯಿ ರತ್ನಮ್ಮ ಅವರು ಕಾಣೆಯಾಗಿರುವ ಕುರಿತಂತೆ ಚಳ್ಳಕೆರೆ ಠಾಣೆಗೆ ದೂರು ನೀಡ ಲು ಹೋಗಿದ್ದಾಗ,ಅದನ್ನು ದಾಖಲಿಸಿಕೊಳ್ಳಲಿಲ್ಲವೆಂಬ ಆಕ್ರೋಶದಲ್ಲಿ ನಾನು ಭಯೋತ್ಪಾದಕನಾಗುವೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ವಿಡಿ ಯೋ ಹರಿಬಿಟ್ಟಿದ್ದ. ಬಳಿಕ ಆಗಸ್ಟ್ 14ರಂದು ಬೆಂಗಳೂರಿನ ವಿಧಾನಸೌಧದ ಬಳಿಕ ತನ್ನ ಬೈಕ್ ಬೆಂಕಿ ಹಚ್ಚಿದ್ದು,ವಿಧಾನಸಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.