ಹಾವೇರಿ: ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ವರ್ಷದ ಸಂಭ್ರಮಕ್ಕೆಂದು ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಕಾರ್ಯಕರ್ತರು ಹಾಕಿದ್ದ ಕಟೌಟ್‌ಗಳನ್ನು ಪೊಲೀಸರೇ ತೆರವುಗೊಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ ಹತ್ಯೆ ಹಿನ್ನಲೆಯಲ್ಲಿ ಶಿಗ್ಗಾಂವಿ ಪಟ್ಟಣದಲ್ಲಿ ಹಿಂದು ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಸಿಎಂ ಕಟೌಟ್‌ಗಳಿಗೆ ಕಾರ್ಯಕರ್ತರು ಬೆಂಕಿ ಹಚ್ಚಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸರೇ ಸಿಎಂ ಕಟೌಟ್‌ಗಳಿಗೆ ಭದ್ರತೆ ಒದಗಿಸಿದ್ದರು. ನಂತರ ಪುರಸಭೆ ಸಿಬ್ಬಂದಿ ಮೂಲಕ ತೆರವುಗೊಳಿಸಿದರು. ಸಿಎಂ ತವರಲ್ಲಿಯೇ ಪ್ರವೀಣ ಹತ್ಯೆಗೆ ಆಕ್ರೋಶ ವ್ಯಕ್ತವಾಗಿದೆ.