ಗೋಕರ್ಣ: ಸೇನೆಯಲ್ಲಿ ಜಮ್ಮು-ಕಾಶ್ಮೀರ, ಪಂಜಾಬ ಮುಂತಾದೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿ ಹಾರುಮಾಸ್ಕೇರಿ ಗ್ರಾಮಕ್ಕೆ ಆಗಮಿಸಿದ ಯೋಧ ರಮೇಶ ಗೌಡ ಅವರನ್ನು ವಿವಿಧ ಸಂಘಟನೆಗಳು ಸ್ವಾಗತಿಸಿ ಸನ್ಮಾನಿಸಿದವು.
ಗೋಕರ್ಣದ ಪ್ರವೇಶ ದ್ವಾರದಲ್ಲಿ ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ಗುಣಿ ಮತ್ತು ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ ಹಾರ ಹಾಕಿ ಗೌರವಿಸಿದರು. ನಂತರ ಅವರನ್ನು ತೆರದ ವಾಹನದಲ್ಲಿ ಗೋಕರ್ಣದಿಂದ ಹಾರುಮಾಸ್ಕೇರಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಘಟಕಾಧ್ಯಕ್ಷ ನಾಗೇಂದ್ರ ಬಿ.ಪಡ್ತಿ, ಸಂತೋಷ ನಾಯ್ಕ, ನಾಗರಾಜ ತಾಂಡೇಲ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ಗಣೇಶ ನಾಯ್ಕ, ನಾಗರಾಜ ಗೌಡ ಮುಂತಾದವರು ಸಿಹಿ ನೀಡಿ ಸನ್ಮಾನಿಸಿದರು. ಹಾರುಮಾಸ್ಕೇರಿ ಮತ್ತು ಬಾವಿಕೊಡ್ಲದ ಮಹಾಸತಿ ಕ್ರೀಡಾ ಬಳಗ ಹಾಗೂ ಗಂಗಾವಳಿ ಗ್ರಾಮಸ್ಥರ ವತಿಯಿಂದಲೂ ರಮೇಶ ಗೌಡ ಅವರಿಗೆ ಗೌರವ ಸಲ್ಲಿಸಲಾಯಿತು.