oppo_2 
ಜಿಲ್ಲೆ

ತಳವಾರರಿಗೆ ನ್ಯಾಯಯುತ ಎಸ್‌ಟಿ

ಕಲಬುರಗಿ: ರಾಜ್ಯದಲ್ಲಿ ನ್ಯಾಯಯುತವಾಗಿ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆ. ಆದರೆ ಕೋರ್ಟ್ ಆದೇಶವನ್ನು ತಿರುಚಿ, ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲೇ ಇರುವಾಗಲೇ ಕೆಲವರು ವಿನಾಕಾರಣ ಸುಳ್ಳು ಹೇಳಿ ತೊಂದರೆ ನೀಡುತ್ತಿದ್ದಾರೆ ಎಂದು ತಳವಾರ ಮಹಾಸಭೆ ಜಿಲ್ಲಾಧ್ಯಕ್ಷ ಚಂದ್ರಕಾAತ ತಳವಾರ ಆರೋಪಿಸಿದರು.
ಮಾರಪ್ಪ ನಾಯಕ ಎಂಬುವವರು ವಿನಾಕಾರಣ ಅಧಿಕಾರಿಗಳನ್ನು ಬೆದರಿಸಿ ತಳವಾರರಿಗೆ ಪ್ರಮಾಣಪತ್ರವನ್ನು ಕೊಡುವುದಕ್ಕೆ ತಡೆ ಒಡ್ಡುತ್ತಿದ್ದಾರೆ. ಸರ್ಕಾರವೂ ಮಾರಪ್ಪ ನಾಯಕ ಅವರ ಮನವಿ ತಿರಸ್ಕರಿಸಿದೆ. ಬುಡ್ಡಕಟ್ಟು ಕುಲಶಾಸ್ತಿçÃಯ ಅಧ್ಯಯನ ಆಧರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ರೆಜಿಸ್ಟರ್ ಜನರಲ್ ಆಫ್ ಇಂಡಿಯಾ ಅಧ್ಯಯನ ನಡೆಸಿ, ಸಾಂವಿಧಾನಿಕವಾಗಿ ಪ್ರಮಾಣಪತ್ರ ವಿತರಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ನಕಲಿ ಸರ್ಟಿಫಿಕೇಟ್‌ಗಳನ್ನು ಪಡೆದಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಲಾಗುತ್ತಿದೆ. ಬೇರೆಯವರಿಗೆ ಸುಳ್ಳು ಪ್ರಮಾಣಪತ್ರ ನೀಡಿದ್ದರೆ ಜಿಲ್ಲಾ ಸಮಿತಿ ವಿಚಾರಣೆ ಮಾಡುವ ಶಿಷ್ಟಾಚಾರವಿದೆ. ಆದರೆ ಮಾರಪ್ಪ ನಾಯಕ ಅಂತವರು ಯಾರು ಈ ಬಗ್ಗೆ ಸರ್ಟಿಫಿಕೇಟ್ ನೀಡುವವರು? ಎಂದು ಪ್ರಶ್ನಿಸಿದರು.
ಬೇಡ, ವಾಲ್ಮಿಕಿ, ನಾಯಕ, ತಳವಾರ ಜಾತಿಯವರು ಸಹೋದರ ಸಂಬAಧದಲ್ಲಿ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುತ್ತಿದ್ದು, ಮಾರಪ್ಪ ನಾಯಕ್ ಅಂತವರು ಜಾತಿಗಳ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ. ಕೋರ್ಟ್ ಆದೇಶವನ್ನು, ಸೂಚನೆಯನ್ನು ತಿರುಚಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪೃಥ್ವಿರಾಜ ಬಿರಾದಾರ, ಗಿರೀಶ ತುಂಬಗಿ, ರಾಜೇಂದ್ರ ತಳವಾರ, ಶಿವಕುಮಾರ ಫಿರೋಜಾಬಾದ್, ಸಂತೋಷ, ಪ್ರವೀಣ ತೆಗ್ಗಳ್ಳಿ, ಗುರುನಾಥ ಇತರರಿದ್ದರು.