ಜಿಲ್ಲೆ

ತಳವಾರ- ಪರಿವಾರ ಸಮುದಾಯದಿಂದ ತಲೆ ಮೇಲೆ ಕಲ್ಲು ಹೊತ್ತು ಬಿಸಿಲಲ್ಲಿ ಪ್ರತಿಭಟನೆ

ವಿಜಯಪುರ: ತಳವಾರ ಮತ್ತು ಪರಿವಾರ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಸಚಿವೆ ಶಶಿಕಲಾ ಜೊಲ್ಲೆ ಅವರ ಕುಂದುಕೊರತೆ ಸಭೆ ವೇಳೆ ಸಮುದಾಯ ಬಾಂಧವರು ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟಿಸಿದರು.

ಸಿಂದಗಿಯ ಸಾತವೀರೇಶ್ವರ ಸಭಾಭವನದಲ್ಲಿ ಬುಧವಾರ ಸಚಿವೆ ಜೊಲ್ಲೆ ಅವರು ಕುಂದು ಕೊರತೆ ಸಭೆ ಆಯೋಜಿಸಿದ್ದರು‌. ಈ ವೇಳೆ ಏಕಾ ಏಕಿ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಸಮುದಾಯದ ಮುಖಂಡರು ಕೂಡಲೇ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿದರು.

ಕಳೆದ ಮಾರ್ಚ್ 2020 ರಲ್ಲಿ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್ ಟಿಗೆ ಸೇರ್ಪಡೆ ಮಾಡಿ ರಾಜ್ಯಪತ್ರ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಜಾತಿ ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಎಸ್ ಟಿ ಜಾತಿ ಪ್ರಮಾಣ ಪತ್ರ ಅಇಗದ ಹಿನ್ನೆಲೆ

ಈಗಾಗಲೇ ಗ್ರಾಪಂ ಚುನಾಯಿಂದ ಸಮುದಾಯ ವಂಚಿತವಾಗಿದೆ. ಇದೀಗ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬರುತ್ತಿವೆ. ಕೂಡಲೇ ಜಾತಿ ಪ್ರಮಾಣ ಪತ್ರ ನೀಡದೇ ಹೋದಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.

ಮುಖಂಡರಾದ ಸಿದ್ದಣ್ಣ ಐರೋಡಗಿ, ರಾಜೇಂದ್ರ ಎಂ.ತಳವಾರ, ಸಾಯಬಣ್ಣ ಯಲಗೋಡ, ಜಗದೀಶ ಕೋರಳ್ಳಿ, ಮಾಣಿಕ ಕಲಬಾ ಮತ್ತಿತರರಿದ್ದರು.