ಜಿಲ್ಲೆ

ತಳಮಟ್ಟದಿಂದ ಪಕ್ಷ ಸಂಟನೆ

ನೆಲಮಂಗಲ: ರಾಜ್ಯದಲ್ಲಿ ತಳಮಟ್ಟದಿಂದ ಬಿಜೆಪಿ ಸಂಟಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈಕಲ್​ನಲ್ಲಿ ಸಂಚರಿಸಿ ರಾಜ್ಯದಲ್ಲಿ ಬಿಜೆಪಿ ಸಂಟಿಸಿದ ಧೀಮಂತ ಯಡಿಯೂರಪ್ಪ ರಸ್ತೆ ಬದಿಯಲ್ಲಿ ವೇದಿಕೆ ನಿರ್ಮಾಣ ಮಾಡಿಕೊಂಡು ಬಿಜೆಪಿ ಬಗ್ಗೆ ಜನಸಾಮಾನ್ಯರಿಗೆ ತಿಳಿಸುತ್ತಿದ್ದರು. ಅಧಿಕಾರ ಅವಧಿಯಲ್ಲಿ ರೈತರು, ಬಡವರು, ಮಹಿಳೆಯರು, ಮಕ್ಕಳಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದಾರೆ. ಭಾಗ್ಯಲ್ಮ ಯೋಜನೆ ಸಾಕಷ್ಟು ಅನುಕೂಲಕರವಾಗಿದೆ. ರಾಜ್ಯದ ಅಭಿವೃದ್ಧಿ ದೂರದೃಷ್ಟಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಜಾರಿಗೊಳಿಸಿದ್ದಾರೆ. ಅವರು ಜಾರಿಗೊಳಿಸಿದ ಯೋಜನೆಗಳು ಜನಮಾನಸದಲ್ಲಿ ಇಂದಿಗೂ ಹಾಸು ಹೊಕ್ಕಾಗಿವೆ ಎಂದರು. ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್​.ಮಲ್ಲಯ್ಯ ಮಾತನಾಡಿ, ರೈತರ ಏಳಿಗೆಗೆ ಶ್ರಮಿಸಿದ ಮುಖ್ಯಮಂತ್ರಿಯಾಗಿ, ಕೇವಲ 4 ವಿಧಾನಸಭಾ ಸದಸ್ಯರಿದ್ದ ಪಾರ್ಟಿಯನ್ನು ಸರ್ಕಾರ ರಚಿಸುವವರೆಗೂ ಶ್ರಮಿಸಿ 4 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಗ್ರಗಣ್ಯ ನಾಯಕರಾಗಿದ್ದಾರೆ. ಎಲ್ಲ ರಾಜಕೀಯ ನಾಯಕರಿಗೂ ಅವರು ಮಾದರಿ ಎಂದರು. ಮಾಜಿ ಸಿಎಂ ಬಿಎಸ್​ವೈ ಜನ್ಮ ದಿನದ ಪ್ರಯುಕ್ತ ೇತ್ರ ಬಿಜೆಪಿಯಿಂದ 150ಕ್ಕೂ ಹೆಚ್ಚು ಪ್ರಗತಿಪರ ರೈತರನ್ನು ಸನ್ಮಾನಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 100 ರೋಗಿಗಳಿಗೆ ಹಣ್ಣು ವಿತರಣೆ ಸೇರಿ ತಾಲೂಕಿನಾದ್ಯಂತ ಜನಪರ ಕಾರ್ಯ ಹಮ್ಮಿಕೊಳ್ಳಲಾಗಿತ್ತು ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೃಂಗೇಶ್​, ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್​ ಬಾಬು, ನಗರಸಭೆ ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ರಾಮಮೂರ್ತಿ, ಮುಖಂಡ ಮಂಜುನಾಥ್​, ನಾಗರಾಜು, ರಮೇಶ್​, ರಾಜಮ್ಮಪ್ರಕಾಶ್​, ವೇದಾವತಿ, ಸೌಮ್ಯಾ, ಸುಮಾ, ಶಾಂಕುಮಾರಿ ಇದ್ದರು.

ಮಾಜಿ ಶಾಸಕರಿಗೆ ಕಿವಿಮಾತು ಕಾಂಗ್ರೆಸ್​ ಶಾಸಕ ಎನ್​.ಶ್ರೀನಿವಾಸ್​ ಅವರ ಬಗ್ಗೆ ವೇದಿಕೆಯಲ್ಲಿ ಹೊಗಳಿಕೆ ಮಾತುಗಳನ್ನಾಡಿ ಅವರನ್ನು ಮೆಚ್ಚಿಸುವ ಕೆಲಸವನ್ನು ಬಿಜೆಪಿ ಮಾಜಿ ಶಾಸಕ ಎಂ.ವಿ.ನಾಗರಾಜು ಮಾಡುತ್ತಿರುವುದು ಬೇಸರದ ಸಂಗತಿ. ಕೂಡಲೇ ಹೊಗಳಿಕೆ ನಿಲ್ಲಿಸಿ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ೇತ್ರದಲ್ಲಿ ಪಕ್ಷವನ್ನು ಬಲಪಡಿಸಬೇಕೆಂದು ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್​ ಚೌಧರಿ ಕಿವಿಮಾತು ಹೇಳಿದರು.