ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಯುವಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಯುವ ಕಾಂಗ್ರೆಸ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಉದ್ಘಾಟಿಸಿದರು. ಮಂಜುನಾಥ ಭಂಡಾರಿ, ಮಂಜುನಾಥ ಗೌಡ, ಶ್ರೀಜಿತ್ ಗೌಡ, ಡಾ.ಡಿ.ಎಲ್.ವಿಜಯಕುಮಾರ್, ಡಾ. ಕೆ.ಪಿ.ಅಂಶುಮAತ್, ಗಾಯತ್ರಿ ಶಾಂತೇಗೌಡ ಮತ್ತಿತರರಿದ್ದರು. 
ಜಿಲ್ಲೆ

ತಳಮಟ್ಟದಿಂದ ಪಕ್ಷ ಸಂಘಟಿಸಲು ಜನತೆಯ ಸಮಸ್ಯೆ ಆಲಿಸಿ

ಚಿಕ್ಕಮಗಳೂರು: ತಳಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಎಲ್ಲ ಬೂತ್‌ಗಳಲ್ಲಿ ಜನತೆಯ ಸಮಸ್ಯೆಗಳನ್ನು ಆಲಿಸಬೇಕು. ಗ್ರಾಮೀಣ ಯುವಕರಿಗೆ ಪಕ್ಷದ ಸಿದ್ಧಾಂತವನ್ನು ಪರಿಚಯಿಸಿ ಸದಸ್ಯರನ್ನಾಗಿಸಿದರೆೆ ಭವಿಷ್ಯದಲ್ಲಿ ಕಾರ್ಯಕರ್ತರು ಉತ್ತಮ ನಾಯಕರಾಗಲು ಸಾಧ್ಯ ಎಂದು ಯುವ ಕಾಂಗ್ರೆಸ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಯುವಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜಕೀಯ ಪಕ್ಷ ಹಾಗೂ ವೈಯಕ್ತಿಕ ಕುಟುಂಬ ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡುವಂತೆ ಮಾತೃ ಸಮಾನವಾದ ಪಕ್ಷವನ್ನು ನಿಷ್ಟೆ, ಪ್ರಾಮಾಣಿಕತೆ ಹಾಗೂ ಚುರುಕಿನಿಂದ ಸಂಘಟಿಸುವ ಜೊತೆಗೆ ರಾಹುಲ್‌ಗಾಂಧಿ ಅವರ ಆಲೋಚನೆಗಳಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಒತ್ತು ನೀಡಬೇಕು ಎಂದರು.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೂತನ ತಂಡವು ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಗುಣ ಬೆಳೆಸಿಕೊಳ್ಳಬೇಕು. ಧ್ವನಿಯಿಲ್ಲದವರಿಗೆ ಧ್ವನಿ, ಸಾಮಾಜಿಕ ಜ್ಞಾನದ ಕೊರತೆ ಇರುವವರಿಗೆ ಆತ್ಮಸ್ಥೆÊರ್ಯ ತುಂಬುವ ಮನೋಭಾವ ರೂಢಿಸಿಕೊಂಡಲ್ಲಿ ಜನರಿಗೆ ನಮ್ಮ ಬಗ್ಗೆ ವಿಶ್ವಾಸ ಮೂಡಲಿದೆ ಎಂದು ಹೇಳಿದರು.

ಭವಿಷ್ಯದ ಪ್ರಜೆಗಳು ದುರಾಡಳಿತ ಸರ್ಕಾರದಿಂದ ದಾರಿ ತಪ್ಪದಿರಲಿ ಎಂದು ರಾಹುಲ್‌ಗಾಂಧಿ ಅವರು ಯುವಕಾಂಗ್ರೆಸ್ ಸ್ಥಾಪಿಸಿ ಯುವಕ-ಯುವತಿಯರಲ್ಲಿ ಅರಿವು ಮೂಡಿಸಿದ್ದಾರೆ. ಆಯಾ ಗ್ರಾಮಗಳ ಯುವಪೀಳಿಗೆಯನ್ನು ಪಕ್ಷದ ಸದಸ್ಯರನ್ನಾಗಿಸಿ ಮುಂದಿನ ಚುನಾವಣಾ ಅಖಾಡಕ್ಕೆ ಮೊದಲ ಹೆಜ್ಜೆ ಇರಿಸುವ ಜೊತೆ ರಾಜ್ಯದ ಪಂಚ ಗ್ಯಾರಂಟಿಗಳ ಯೋಜನೆಗಳ ಮಾಹಿತಿಗಳನ್ನು ತಲುಪಿಸಬೇಕು ಎಂದರು.

ಪ್ರಸ್ತುತ ರಾಹುಲ್‌ಗಾಂಧಿ ಅವರು ಸದಸ್ಯತ್ವ, ಚುನಾವಣೆ, ತರಬೇತಿ ಹಾಗೂ ಕಾರ್ಯಕ್ರಮ ಎಂಬ ನಾಲ್ಕು ಅಂಶಗಳ ಅಡಿಪಾಯ ಮಾಡಿಕೊಂಡಿದ್ದಾರೆ. ಮುಂದಿನ ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಚುನಾವಣೆಗೆ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಎಲ್ಲೆಡೆ ರಾರಾಜಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಸಮಾಜದಲ್ಲಿ ನಾಯಕರಾಗಲು ಮೊದಲು ಸಾಮಾನ್ಯರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಬೇಕು. ಚುನಾವಣೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಜನರ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದೇ ಮನಸ್ಸಿನಲ್ಲಿ ಶಾಶ್ವತವಾಗಿ ನಂಬಿಕೆ ಉಳಿಸಿಕೊಳ್ಳುವ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಪಕ್ಷ ಸಂಘಟನೆ ಎಂದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊAಡರೆ ಸಾಲದು. ಜನರನ್ನು ಭೇಟಿ ಮಾಡಿ ಕಾಂಗ್ರೆಸ್ ಸಿದ್ದಾಂತ, ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಚರ್ಚಿಸಿ ಮನವರಿಕೆ ಮಾಡಿದ್ದಲ್ಲಿ ಎಲ್ಲೆಡೆ ಕಾಂಗ್ರೆಸ್ ಸಂಘಟಿತವಾಗಿ ಬೆಳೆಯಬಹುದು ಎಂದು ಹೇಳಿದರು.

ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ಕ್ಷೇತ್ರವಾದ ಚಿಕ್ಕಮಗಳೂರು ವಿಶೇಷತನವನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ಮಲೆನಾಡಿನ ಪರಿಸರದಂತೆ ಶುದ್ಧಮನಸ್ಸಿನ ನಿವಾಸಿಗಳಾದ ಕಾರಣ ರಾವಣನಂಥ ಹಿಂದಿನ ಶಾಸಕರನ್ನು ಸೋಲಿಸಿ ಮನೆಗೆ ಕಳುಹಿಸಲು ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಹಾಗೂ ಮಹಿಳೆಯರ ಶಕ್ತಿಯೇ ಕಾರಣ ಎಂದರು.

ಬಿಜೆಪಿ ಮುಖಂಡರು ಧರ್ಮ, ಜಾತಿ ಹೆಸರಿನಲ್ಲಿ ಜನತೆಗೆ ಮಂಕುಬೂದಿ ಎರಚುತ್ತಿದ್ದಾರೆ. ಹಣ, ಆಸ್ತಿ ಕಳೆದರೂ ತಿರುಗಿ ಪಡೆಯಬಹುದು. ಆದರೆ ದೇಶದ ಯುವಪೀಳಿಗೆ ದಾರಿತಪ್ಪಿದರೆ ರಾಷ್ಟçದ ಭವಿಷ್ಯಕ್ಕೆ ಭಯಾನಕ ಸ್ಥಿತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ, ಯುವಕರನ್ನು ಧರ್ಮದ ಹೆಸರಿನಲ್ಲಿ ಪಾತಾಳ ಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮAತ್ ಮಾತನಾಡಿ, ಯುವಕಾಂಗ್ರೆಸ್ ಸಾರಥ್ಯ ವಹಿಸಿರುವ ಅಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಸಾಗಲು ಇಚ್ಚಾಶಕ್ತಿಯ ಅವಶ್ಯಕತೆಯಿದೆ. ಜನರೊಂದಿಗೆ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಗಟ್ಟಿಯಾದ ವಿಚಾರವನ್ನು ಪ್ರಸ್ತಾಪಿಸಬೇಕು. ಪಕ್ಷ ಹಾಗೂ ರಾಜ್ಯಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎನ್.ಆದಿಲ್, ಅಜಿತ್, ಶಿವಪ್ರಸಾದ್, ಬಾಹುಬಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ. ಎಲ್.ವಿಜಯ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್ ಗೌಡ, ಮುಖಂಡರಾದ ತನೋಜ್‌ನಾಯ್ಡು, ಶಾದಬ್, ಸಿ.ಎನ್.ಅಕ್ಮಲ್, ಶಿವಕುಮಾರ್ ಮತ್ತಿತರರು ಉಪಸ್ಥಿ ತರಿದ್ದರು.