ಜಿಲ್ಲೆ

ತಲೆಯ ಮೇಲೆ ಹಾಕಿ ಬರ್ಬರ ಹತ್ಯೆ:ಪೊಲೀಸರ ಪರಿಶೀಲನೆ

ಹಾಸನ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೊರ ವಲಯದ ಬುಸ್ತೇನಹಳ್ಳಿ ಬಳಿಯ ರೈಲ್ವೆ ಟ್ರಾೃಕ್ ಸಮೀಪ ನಡೆದಿದೆ.
ತಲೆಯ ಮೇಲೆ ಕಲ್ಲು ಹಾಕಿರುವುದರಿಂದ ವ್ಯಕ್ತಿಯ ಗುರುತು ಪತ್ತೆಯಾಗದ ರೀತಿ ಮುಖ ವಿಕಾರಗೊಂಡಿದೆ. ಮೃತ ವ್ಯಕ್ತಿ ಅಂದಾಜು 40 ವರ್ಷದ ಪ್ರಾಯದವನಾಗಿದ್ದು, ಯಾರೆಂಬುದು ತಿಳಿದು ಬಂದಿಲ್ಲ.
ಎರಡು ದಿನಗಳ ಹಿಂದೆಯೇ ಕೊಲೆ ನಡೆದಿರೋ ಶಂಕೆ ಇದೆ. ಇದೇ ಸ್ಥಳದಲ್ಲಿ ಇತರರೊಂದಿಗೆ ಸೇರಿಕೊಂಡು ಪಾರ್ಟಿ ಮಾಡಿದ ನಂತರ ಉಂಟಾದ ವೈಷಮ್ಯ ಹಿನ್ನಲೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಲೆಯಾದ ವ್ಯಕ್ತಿಯ ಬಲಗೈ ಮೇಲೆ ಲಕ್ಷ್ಮೀ ಎಂಬ ಹಚ್ಚೆ ಗುರುತು ಇದೆ. ಶುಕ್ರವಾರ ಬೆಳಿಗ್ಗೆ ಶವ ಪತ್ತೆಯಾದ ಹಿನ್ನಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಿಸಿಕೊಂಡು ಮೃತ ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದಾರೆ. ಶವವನ್ನು ಹಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.