ಕಲಬುರಗಿ: ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನಡೆ ನಡೆದಿದೆ. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಗ್ರಾಮದ ಈರಣ್ಣ ಬಡಿಗೇರ(೩೮) ಕೊಲೆಯಾದ ವ್ಯಕ್ತಿ. ಪಕ್ಕದ ಮನೆಯ ನಾಗಯ್ಯ ಸ್ವಾಮಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. Àರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೈಲಿನಿಂದ ಬಂದಿದ್ದ: ಕೆಲ ದಿನಗಳ ಹಿಂದೆ ನಾಗಯ್ಯ ಸ್ವಾಮಿ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ. ತಾಯಿ ಮತ್ತು ಹೆಂಡತಿ ಜತೆ ಜಗಳವಾಡಿದ್ದಕ್ಕೆ ಈತನ ವಿರುದ್ಧ ತಾಯಿಯೇ ಖುದ್ದು ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಜೈಲು ಸೇರಿದ್ದ. ಮಂಗಳವಾರ ತಡ ರಾತ್ರಿ ಪಕ್ಕದ ಮನೆಯ ಈರಣ್ಣ ಬಡಿಗೇರ್ ಕುಟುಂಬದ ಜತೆಯಲ್ಲಿ ಜಗಳ ತೆಗೆದಿದ್ದ. ಆದರೆ, ಈರಣ್ಣ ಕುಟುಂಬದವರು ಯಾರೂ ಹೊರ ಬಂದಿರಲಿಲ್ಲ. ಬೆಳಗ್ಗೆ ಈರಣ್ಣ ಕುಡಿಯಲು ನೀರು ತರಲು ಬೋರವೆಲ್ ಬಳಿ ಹೋದಾಗ ಅಲ್ಲಿಗೆ ಸಮಯ ಸಾಧಿಸಿದ್ದ ನಾಗಯ್ಯ ಸ್ವಾಮಿ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.