ಜಿಲ್ಲೆ

ತಲಕಾವೇರಿಯಲ್ಲಿ ಪೊನ್ನಣ್ಣ ವಿಶೇಷ ಪೂಜೆ

ಮಡಿಕೇರಿ:

ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಗುರುವಾರ ಭೇಟಿ ನೀಡಿದ್ದರು. ಈ ಸಂದರ್ಭ ಅವರು ಮಾತೆ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಅನ್ನ ಬಡಿಸುವ ಮೂಲಕ ಗಮನ ಸೆಳೆದರು.

ಈ ಸಂದರ್ಭ ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಭಾಗಮಂಡಲ ವಲಯ ಅಧ್ಯಕ್ಷ ವೆಂಕಟೇಶ್, ತಮ್ಮಯ್ಯ, ಸಂಪನ್ ಅಯ್ಯಪ್ಪ, ಮಿಥುನ್ ಮಾಚಯ್ಯ, ನಂದ ದೇವಯ್ಯ, ರವಿರಾಜ್ ಹೊಸೂರು, ಹರ್ಷ, ಪ್ರಕಾಶ್, ಸೂರಜ್ ಹೊಸೂರು ಮತ್ತಿತರರು ಇದ್ದರು.