ಚಿಕ್ಕೋಡಿ: ಶಿಕ್ಷಣ ಮತ್ತು ಜ್ಞಾನದ ಜತೆ ತರ್ಕ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಗುರುಪ್ರಸಾದ ಹೂಗಾರ ಹೇಳಿದರು.
ಸಮೀಪದ ಮಾಂಗನೂರ ನಿಡಸೋಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಎಸ್‌ಜೆಪಿಎನ್ ಟ್ರಸ್ಟ್ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ಜೀವನ ಪದ್ಧತಿ ಬದಲಾಯಿಸಿಕೊಂಡು ಸಮಾಜಮುಖಿಯಾಗಿ ಬದುಕಲು ಎನ್‌ಎಸ್‌ಎಸ್ ಸಹಕಾರಿ ಎಂದರು.
ಕೆ.ಆರ್.ವಸಂತ ಎನ್‌ಎಸ್‌ಎಸ್ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಪ್ರೊ. ಬಿ.ಆರ್.ಉಮರಾಣೆ ಅಧ್ಯಕ್ಷತೆ ವಹಿಸಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಆರ್. ಓಂಕಾರಪ್ಪ ಪ್ರಾಸ್ತಾವಿಕ ಮಾತನಾಡಿದರು. ಹತ್ತರವಾಟ ಗ್ರಾಪಂ ಅಧ್ಯಕ್ಷ ದುಂಡಪ್ಪ ಪಾಟೋಳಿ, ಪಿಡಿಒ ಬಸವರಾಜ ತಾಳಿಕೋಟೆ, ವಾಸುದೇವ ಕುಲಕರ್ಣಿ ಇದ್ದರು. ಗಜಾನನ ಕೋಟಿವಾಲೆ ಸ್ವಾಗತಿಸಿದರು. ಶ್ರೀಶೈಲ ಬಡಿಗೇರ ವಂದಿಸಿದರು.