ಬಾಗಲಕೋಟೆ ನಗರಸಭೆ ಆವರಣದಲ್ಲಿ ಕೆಎಚ್‌ಬಿ ಕಾಲೋನಿ ನಿವಾಸಿಗಳು ಹಾಗೂ ಅಽಕಾರಿಗಳ ನಡುವೆ ವಾಗ್ವಾವಾದ.  
ಜಿಲ್ಲೆ

ತರಾಟೆ ತೆಗೆದುಕೊಂಡ ಸಾರ್ವಜನಿಕರು

ಸಂತೋಷ ದೇಶಪಾಂಡೆ

ಬಾಗಲಕೋಟೆ: ನೀರಿನ ಬಿಲ್ ಕಟ್ಟುವ ವಿಚಾರದಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ನಗರಸಭೆ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

ಶಿಗಿಕೇರಿ ಸಮೀಪದ ಕೆ.ಎಚ್.ಬಿ.ಕಾಲೋನಿ ನಿವಾಸಿಗಳಿಗೆ ನಗರಸಭೆ ಕಂದಾಯ ನಿರೀಕ್ಷಿಕರು ಕಳೆದ ನಾಲ್ಕು ವರ್ಷದ ನೀರಿನ ಕರ ತುಂಬುವAತೆ ನೋಟಿಸ್ ನೀಡಿದ್ದರು, ಇದರಿಂದ ಕೋಪ ನಿವಾಸಿಗಳು ನಗರಸಭೆ ಆಗಮಿಸಿ ಆಯುಕ್ತ ಆರ್.ವಾಸಣ್ಣ ಅವರ ಕಚೇರಿಗೆ ತೆರಳಿದರು. ನೀರಿನ ಬಿಲ್ ೧೦ ಸಾವಿರ ರೂ. ನೀಡುವಂತೆ ನೋಟಿಸ್ ನೀಡಿದ್ದಾರೆ. ಎಷ್ಟು ಸರಿ ನಾಲ್ಕು ವರ್ಷಕ್ಕೆ ಇಷ್ಟು ದೊಡ್ಡ ಮೊತ್ತ ಆಗುತಾ? ಅಂತ ಪ್ರಶ್ನಿಗಳ ಸುರಿಮಳೆಗೈದರು. ಅಽಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಅಳಲು ತೋಡಿಕೊಂಡರು.

ಕಚೇರಿಗೆ ನುಗ್ಗಿದ ಪರಿಣಾಮ ಆಯುಕ್ತ ಆರ್.ವಾಸಣ್ಣ ಹಾಗೂ ನಿವಾಸಿಗಳ ನಡುವೆ ವಾಗ್ದಾದ ಉಂಟಾಯಿತು. ಜನರನ್ನು ನಿಯಂತ್ರಿಸಲು ನಗರಸಭಾ ಸಿಬ್ಬಂದಿ ಹರಸಾಹಸ ಪಟ್ಟರು. ಕೆಲಕಾಲ ನಗರಸಭೆ ಆವರಣ ರಣರಂಗವಾಗಿ ಮಾರ್ಪಟ್ಟಿತ್ತು. ಕೆಲವೊತ್ತಿನ ಬಳಿಕ ಪರಿಸ್ಥಿತಿ ತಿಳಿಗೊಳಿಸಲಾಯಿತು.