ಚಿತ್ರದುರ್ಗ:ತರಬೇತಿಗೆ ತಪ್ಪದೇ ಹಾಜರಾಗಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳ ಬೇಕೆಂದು ಚಿತ್ರದುರ್ಗ ತಾಪಂ ವೈ.ರವಿಕುಮಾರ್ ಕೂಸಿನ ಮನೆ ಆರೈಕೆದಾರರಿಗೆ ಸೂಚಿಸಿದರು.
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ತಾಪಂನಲ್ಲಿ ಬುಧವಾರ ಆಯೋಜಿಸಿದ್ದ ಏಳು ದಿನಗಳ ಕೂಸಿನ ಮನೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಇದ್ದಾಗಿದ್ದು,ಮೊದಲ ಹಂತದ ತರಬೇತಿ ಮುಗಿದಿದೆ. ಎರಡನೇ ಹಂತದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಕೊಡುವಂಥ ಮಾಹಿತಿಯನ್ನು ಶ್ರದ್ಧೆಯಿಂದ ಗ್ರಹಿಸ ಬೇಕು.
ನರೇಗಾ ಕಾರ್ಮಿಕರ ಮಕ್ಕಳನ್ನು ಕೂಸಿನ ಮನೆಯಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ಮಕ್ಕಳ ಲಾಲನೆ ಪಾಲನೆಯಲ್ಲಿ ಯಾವುದೇ ಲೋಪವಾಗ ಬಾರ ದು. ಪೌಷ್ಟಿಕಾಂಶ ಆಹಾರ ಹಾಗೂ ಸ್ವಚ್ಚತೆಯನ್ನು ಕಾಪಾಡಿಕೊಂಡು,ಮಕ್ಕಳ ಸಂರಕ್ಷಣೆ ಮಾಡುವ ಜವಾಬ್ದಾರಿ ತ ಮ್ಮಗಳ ಮೇಲಿದೆ ಎಂದು ಆರೈಕೆದಾರರನ್ನು ಎಚ್ಚರಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಎಚ್.ಎಸ್.ಮಂಜುಳಾ,ವಾಸವಿ,ಭವ್ಯ,ನಿಜಲಿಂಗಪ್ಪ ಇದ್ದರು.