ಜಿಲ್ಲೆ

ತರಬೇತಿ ಸದುಪಯೋಗವಾಗಲಿ

ಚಿತ್ರದುರ್ಗ:ಟೈಲರಿಂಗ್,ಕಂಪ್ಯೂಟರ್ ಆಧಾರಿತ ಎಂಬ್ರಾಯಡರಿ ತರಬೇತಿ ಸದುಪಯೋಗ ಪಡೆಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ.ವೇಮಣ್ಣ ನಿರುದ್ಯೋಗಿ ಮಹಿಳೆಯರಿಗೆ ಸಲಹೆ ನೀಡಿದರು. ನಗರದ ಜನಶಿಕ್ಷಣ ಕಚೇ ರಿಯಲ್ಲಿ ಈಚೆಗೆ ಆಯೋಜಿಸಿದ್ದ ಸ್ವ ಉದ್ಯೋಗ ತರಬೇತಿ ಕಾರ‌್ಯಾಗಾರ ರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜನ ಶಿಕ್ಷಣ ಸಂಸ್ಥೆ 3 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗಿ ಯುವಜನರಿಗೆ ಸ್ವ ಉದ್ಯೋಗ ತರಬೇತಿ ನೀಡುತ್ತಿದೆ. ತರ ಬೇತಿ ಪಡೆದವರಿಗೆ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ದೊರಕಲಿದೆ. ಆಸಕ್ತರು 6360710221ನ್ನು ಸಂಪರ್ಕಿಸಬಹುದೆಂದರು. ಜಿಲ್ಲಾ ಮಕ್ಕಳಾ ರಕ್ಷಣಾ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ್, ಕಾರ‌್ಯಾಕ್ರಮಾಧಿಕಾರಿ ಭರತ್ ಮತ್ತಿರರು ಇದ್ದರು.