ಹಾಸನ : ಪ್ರತಿಯೊಬ್ಬರಿಗೂ ಶಿಸ್ತು ಮತ್ತು ದೈರ್ಯ ಬಹಳ ಮುಖ್ಯ ಹಾಗಾಗಿ ಬಂದೂಕುಗಳ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ತರಬೇತಿ ಪಡೆದ ಪ್ರತಿಯೊಬ್ಬರು ಉತ್ತಮ ಕೆಲಸಗಳಿಗೆ ಈ ತರಬೇತಿಯನ್ನು ಬಳಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತೂ ಹೇಳಿದರು.
ನಗರದ ಡಿ ಎ ಆರ್ ಸಭಾಂಗಣದಲ್ಲಿ ಗುರುವಾರ ಹಾಸನ ಜಿಲ್ಲಾ ಪೊಲೀಸ್ ಸಶಾಸ್ತ್ರ ಮೀಸಲು ಪಡೆ ವತಿಯಿಂದ ನಾಗರೀಕ ಬಂದೂಕು ತರಬೇತಿ ಶಿಬಿರ 2022-23 ರ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಕಳೆದ ಒಂದು ವಾರಗಳಿಂದ ಈ ತರಬೇತಿಯನ್ನು ನೀಡಿದ್ದು, ಆಸಕ್ತಿವಹಿಸಿ ಆಗಮಿಸಿದ ಪ್ರತಿಯೊಬ್ಬರಿಗೂ ಪೊಲೀಸ್ ಇಲಾಖೆ ಉತ್ತಮ ತರಬೇತಿ ನೀಡಿದೆ. ತರಬೇತಿ ನೀಡಿರುವುದು ಉತ್ತಮ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದ್ದು ಯಾವುದೇ ದುರುದ್ದೇಶಕ್ಕೆ ಕಾರ್ಯಗಳಿಗಲ್ಲ ಎಂಬುದನ್ನು ಮೊದಲು ಅರಿತು ಸಮಾಜದಲ್ಲಿ ಶಿಸ್ತನ್ನು ಕಾಪಾಡಬೇಕು .ಶಿಬಿರದ ಸದುಪಯೋಗ ಪಡೆದುಕೊಂಡ ಪ್ರತಿಯೊಬ್ಬರು ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳಂತೆ ತಮ್ಮನ್ನ ತಾವು ರಕ್ಷಿಸಿಕೊಳ್ಳವ ಕೆಲಸಗಳನ್ನು ಮಾಡಬೇಕು ಹಾಗೂ ದೇಶಕ್ಕೆ ಆಪತ್ತು ಬಂದಾಗ ಪೊಲೀಸ್ ಇಲಾಖೆಯೊಂದಿಗೆ ಯೋಧರಂತೆ ಸಹಕಾರ ನೀಡಬೇಕು ಎಂದರು.
ಸಾರ್ವಜಿನಿಕರಿಂದ ತರಬೇತಿಯನ್ನು ಪಡೆಯಲು ಹೆಚ್ಚಿನ ಕೋರಿಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಕಲೇಶಪುರ ಹಾಗೂ ಇತರೆ ತಾಲೂಕುಗಳ ಸಾರ್ವಜನಿಕರಿಗೆ ಹಾಸನ ನಗರದಲ್ಲಿ ತಲಾ 100 ಜನರಂತೆ ಎರಡು ತಂಡಗಳನ್ನು ರಚಿಸಿ ತರಬೇತಿ ನೀಡಲಾಗುವುದು ಪ್ರತಿಯೊಬ್ಬರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತರಬೇತಿ ಪಡೆದ 58 ಜನರಿಗೆ ಪ್ರಮಾಣ ಪತ್ರ ವಿತರಿಸಲಾಗಿದ್ದು ಶಿಬಿರದಲ್ಲಿ ತರಬೇತಿ ನೀಡಿದ ತರಬೇತುದಾರರಿಗೆ ಸನ್ಮಾನಿಸಿ ಗೌಡವಿಸಲಾಯಿತು. ಡಿಎಆರ್‌ನ ಡಿವೈಎಸ್‌ಪಿ ಕುಮಾರಸ್ವಾಮಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಗುರುನಾಥ್ ಬಡೆಗೇರ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಯದೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯನಿರತ ಪತ್ರಕರ್ತಸಂಘದ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್, ನಂಜಪ್ಪ, ರಮೇಶ್ ಇತರರು ಇದ್ದರು.