ಸಕಲೇಶಪುರ: ಪಟ್ಟಣದಲ್ಲಿ ತರಕಾರಿಗಿಂತ ಮೀನಿನ ಬೆಲೆಯೆ ಅಗ್ಗವಾಗಿದ್ದು ಶಾಖಾಹಾರಿಗಳ ಸಂತಸಕ್ಕೆ ಎಣೆಯೆ ಇಲ್ಲದಂತೆ ಮಾಡಿದೆ.
ಹೌದು ಆಶ್ಚರ್ಯವಾದರು ಸತ್ಯ. ಪಟ್ಟಣದಲ್ಲಿ ಟಮೋಟ ಹೊರತುಪಡಿಸಿ ಎಲ್ಲ ತರಕಾರಿಬೆಲೆ ಪ್ರತಿ ಕೆ.ಜಿಗೆ ನೂರರ ಗಡಿ ದಾಟಿದ್ದು ನುಗ್ಗೆಕಾಯಿ,ಸುಲಿಯುವ ಕಾಳಿನಂತಹ ಕೆಲವು ತರಕಾರಿಗಳ ಬೆಲೆ ಮೂನ್ನೂರರ ಗಡಿಯಲ್ಲಿದೆ. ಸೊಪ್ಪಿನ ಬೆಲೆ ಪ್ರತಿಕಟ್ಟಿಗೆ 10 ರಿಂದ 20 ರೂಗಳ ತಲುಪಿದ್ದು ಸಸ್ಯಹಾರಿಗಳಿಗೆ ತರಕಾರಿ ಬೆಲೆ ಕೇಳಿಯೆ ಸುಸ್ತಾಗುವಂತಾಗಿದೆ. ಆದರೆ, ಪಟ್ಟಣದಲ್ಲಿ ಸಸ್ತಬೆಲೆಯಲ್ಲಿ ಮೀನು ದೊರೆಯುತ್ತಿರುವುದು ಶಾಖಾಹಾರಿಗಳ ಸಂತಸಕ್ಕೆ ಕಾರಣವಾಗಿದೆ.
ಕಳೆದೊಂದು ವಾರದಿಂದ ಪಟ್ಟಣದಲ್ಲಿ ನೂರರೂಗಳಿಗೆ ಮೂರು ಕೆಜಿ ಬಂಗಡೆ ಮೀನು ದೊರೆಯುತ್ತಿದ್ದು ತರಕಾರಿಗಿಂತ ಅಗ್ಗ ಎನ್ನಲು ಕಾರಣವಾಗಿದೆ.
ಮಾರಾಟ ದಾಖಲೆ ಹೆಚ್ಚಳ: ಸಾಮಾನ್ಯವಾಗಿ ಬಂಗಡೆ ಮೀನಿನ ಬೆಲೆ ವರ್ಷಪೂರ್ಣ 160 ರಿಂದ 250 ರೂಗಳ ಅಸುಪಾಸಿನಲ್ಲಿರುವ ಸಂದರ್ಭದಲ್ಲಿ ಸೋಮವಾರಪೇಟೆ ಹಾಗೂ ಸಕಲೇಶಪುರ ತಾಲೂಕುಗಳಿಂದ 150 ರಿಂದ 200 ಕೆ.ಜಿ ಮೀನು ಮಾರಾಟವಾಗುತಿತ್ತು. ಆದರೆ, ಮೀನಿನ ಧಾರಣೆ ದಿಢೀರ್ ಕುಸಿತದಿಂದಾಗಿ ಈ ಎರಡು ತಾಲೂಕಿನಲ್ಲಿ ಮೀನಿನ ಮಾರಾಟ ಶೇ 100 ರಷ್ಟು ಏರಿಕೆಯಾಗಿದ್ದು ಪ್ರತಿದಿನ 2500 ಕೆ.ಜಿ ಮೀನು ಬಿಕರಿಯಾಗುತ್ತಿದೆ. 25ಕೆಜಿ ಮೀನು ಮಾರಾಟಕ್ಕೆ ದಿನಗಳ ಕಾಲ ತೆಗೆದುಕೊಳ್ಳುತ್ತಿದ್ದ ವ್ಯಾಪಾರಿ ಕಳೆದೊಂದು ವಾರದಿಂದ 25 ಕೆಜಿ ಮೀನುಗಳನ್ನು ಕೆಲವೇ ನಿಮಿಷಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಗ್ಗದ ಬೆಲೆಗೆ ದೊರೆಯುತ್ತಿರುವ ಕಾರಣ ಪ್ರತಿ ಗ್ರಾಹಕ ಕನಿಷ್ಠ 5 ಕೆಜಿ ವರಗೂ ಮೀನು ಖರೀಧಿಸುತ್ತಿದ್ದಾರೆ ಎಂಬುದು ಮೀನು ವ್ಯಾಪಾರಿಗಳ ಹೇಳಿಕೆ.
ತಾಜಾಮೀನು:
ಮಂಗಳೂರಿನಿಂದ ಲಾರಿಯಲ್ಲಿ ಬರುವ ಮೀನನ್ನು ಸ್ಥಳೀಯ ವ್ಯಾಪಾರಿಗಳು ಮಂಜುಗೆಡ್ಡೆಯಲ್ಲಿಟ್ಟು ವಾರವಿಡಿ ಮಾರಾಟ ಮಾಡಬೇಕಿತ್ತು. ಇದರಿಂದಾಗಿ ಗ್ರಾಹಕರಿಗೆ ತಾಜಾ ಮೀನಿನ ಅಸ್ವದ ಅಪರೂಪ ಎಂಬಂತಾಗಿತ್ತು. ಆದರೆ, ಬೆಲೆ ಸಸ್ತವಾಗಿರುವ ಕಾರಣ ಗ್ರಾಹಕರ ಸಂಖ್ಯೆ ಏರಿಕೆಯಾಗಿದ್ದು ಪ್ರತಿದಿನ ಮಾರುಕಟ್ಟೆಗೆ ಬರುವ ಮೀನು ಅಂದೆ ಬಿಕರಿಯಾಗುವುದರಿಂದ ನಿತ್ಯ ತಾಜಾ ಮೀನುಗಳು ಗ್ರಾಹಕರಿಗೆ ದೊರಕುತ್ತಿವೆ.
ಬೆಲೆ ಇಳಿಕೆಗೆ ಕಾರಣ:
ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಅತಿಯಾದ ಮನ್ಸೂನಿಂದ ಸಮುದ್ರದ ಉಬ್ಬರ ಹೆಚ್ಚಿದ್ದ ಕಾರಣ ಸಂಪ್ರಧಾಯಿಕ ಮೀನುಗಾರಿಕೆಗೆ ಕಡಿವಾಣ ಹಾಕಲಾಗಿತ್ತು. ಕನಿಷ್ಠ ತಿಂಗಳ ಕಾಲ ಮೀನುಗಾರಿಕೆ ನಡೆಸದಿರುವುದು ಇಂದು ಸಮುದ್ರದಲ್ಲಿ ಮೀನುಗಳು ಬಾರಿ ಪ್ರಮಾಣದಲ್ಲಿ ದೊರೆಯಲು ಕಾರಣ ಎಂಬ ಮಾತುಗಳಿವೆ. ಸಮುದ್ರಕ್ಕಿಳಿಯುವ ಪ್ರತಿ ದೋಣಿಗೂ ಬಂಗಡೆ ಹೊರತುಪಡಿಸಿ ಬೇರೆ ಯಾವುದೆ ಜಾತಿಯ ಮೀನುಗಳು ದೊರೆಯದಿರುವುದು ಮತ್ತೊಂದು ಆಶ್ಚರ್ಯ. ಸಮುದ್ರದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುತ್ತಿರುವ ಮೀನನ್ನು ವ್ಯಾಪಾರಿಗಳು ಕೇಳಿದ ಬೆಲೆಗೆ ನೀಡ ಬೇಕು ಅಥಾವ ಸಮುದ್ರಕ್ಕೆ ವಾಪಸ್ಸ ಬೀಡಬೇಕು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮೀನುಗಾರ ಜಕ್ಕಣ್ಣ ರೈ.
ಕೈತುಂಬಕಾಸು:
ಸಾಮಾನ್ಯವಾಗಿ ಪ್ರತಿ ಮೀನುವ್ಯಾಪಾರಗಾರ ದಿನಪೂರ್ಣ ಸುತ್ತಾಟ ನಡೆಸಿದರು 10 ರಿಂದ 20ಕೆ.ಜಿ ಮೀನು ಮಾರಾಟ ನಡೆಸುವುದು ದುಸ್ಥರವಾಗಿತ್ತು. ಆದರೆ, ಕಳೆದೊಂದು ವಾರದಿಂದ ಪ್ರತಿ ವ್ಯಾಪಾರಿ ಕನಿಷ್ಠ 200 ರಿಂದ 250 ಕೆ.ಜಿವರಗೆ ಮೀನು ಮಾರಾಟ ಮಾಡುತ್ತಿದ್ದು ಅಧಿಕ ಸಂಪಾಧನೆಗೆ ದಾರಿಯಾಗಿದೆ.
ಮೀನುಮಾರುಕಟ್ಟೆ ಇಲ್ಲ: ಪಟ್ಟಣದಲ್ಲಿ ಕಳೆದ ಮೂರು ವರ್ಷಗಳಿಂದ ಮೀನು ಮಾರುಕಟ್ಟೆ ಹಾರಾಜು ನಡೆಸದ ಕಾರಣ ಪುರಸಭೆಗೆ ಬರಬೇಕಿದ್ದ ಲಕ್ಷಾಂತರ ಆಧಾಯ ಕೈತಪ್ಪಿದೆ. ಇದು ಮೀನುಮಾರಾಟದ ಅದಿಪತ್ಯದ ಪತನಕ್ಕೂ ಕಾರಣವಾಗಿದ್ದು ಮುಕ್ತಮಾರುಕಟ್ಟೆ ನಿರ್ಮಾಣವಾಗಿದೆ.ಪರಿಣಾಮ ಪಟ್ಟಣದ ಹಲವರು ಇಂದು ಮೀನು ವ್ಯಾಪಾರ ಆರಂಬಿಸಿದ್ದು ಪಟ್ಟಣದ ಹಲವೇಡೆ ಮೀನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ನಡುವೆ ಪೈಪೋಟಿ ನಡೆಯುತ್ತಿದ್ದು ಗ್ರಾಹಕರಿಗೆ ಅತಿಕಡಿಮೆ ಧರದಲ್ಲಿ ಮೀನುಗಳು ದೊರೆಯಲು ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಕೆರೆಮೀನು ಕೇಳುವವರಿಲ್ಲ:
ಪಟ್ಟಣದ ಕೆಲವು ಮೀನು ವ್ಯಾಪಾರಿಗಳು ಕೆರೆ ಮೀನಿನ ವ್ಯಾಪಾರಿದಲ್ಲಿ ತೊಡಗಿದ್ದಾರೆ. ಆದರೆ, ಕಳೆದೊಂದು ವಾರದಿಂದ ಕೆರೆಮೀನು ಕೇಳುವವರಿಲ್ಲದ ಕಾರಣ ಈ ವ್ಯಾಪಾರಿಗಳು ಸಹ ಸಮುದ್ರದ ಮೀನಿನ ವ್ಯಾಪಾರಕ್ಕೆ ಇಳಿದಿದ್ದಾರೆ.
ವ್ಯಾಪಾರಿಗಳಿಂದ ಇರಿಸುಮುರಿಸು:
ಪಟ್ಟಣದ ಅಜಾದ್ ರಸ್ತೆಯಲ್ಲಿದ್ದ ಮೀನು ಮಾರುಕಟ್ಟೆ ಹಾರಾಜು ನಡೆಸದೆ ಹಲವು ವರ್ಷ ಕಳೆದಿದ್ದಾರೆ, ಲಕ್ಷಾಂತರರೂ ವೆಚ್ಚ ಮಾಡಿ ಅಜಾದ್ ರಸ್ತೆಯಲ್ಲಿ ನಿರ್ಮಿಸಿರುವ ಕುರಿ,ಕೋಳಿ ಹಾಗೂ ಮೀನು ಮಾರಾಟ ಮಳಿಗೆಗಳ ಆರಂಭಕ್ಕೆ ತಾಂತ್ರಿಕ ಅಡಚಣೆ ಎದುರಾಗಿದೆ. ಪರಿಣಾಮ ಪಟ್ಟಣದ ಕೆಲವು ಮೀನು ಮಾರಾಟಗಾರರು ಪಟ್ಟಣದ ಹಳೇಬಸ್ ನಿಲ್ದಾಣದ ಜನನಿಭಿಡ ರಸ್ತೆ ಹಾಗೂ ಚಂಪಕನಗರ ಟೋಲ್‌ಗೆಟ್ ಜನನಿಭಿಡ ಪ್ರದೇಶದಲ್ಲಿ, ನೆಲದಲ್ಲಿ ಹಾಗೂ ವಾಹನದಲ್ಲಿ ಇಟ್ಟು ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರು ಇರುಸು ಮುರುಸು ಎದಿರಿಸುವಂತಾಗಿದೆ.
''ಪಟ್ಟಣದಲ್ಲಿ ಕಳೆದೊಂದು ವಾರದಿಂದ ಮೀನಿನ ಬೆಲೆ ಅತಿಕಡಿಮೆಯಾಗಿರುವುದರಿಂದ ತರಕಾರಿ ತೆಜಿಸಿದ್ದೆವೆ''
ಶೇಖರ್ ಶೆಟ್ಟಿ ಸಕಲೇಶಪುರ.ಅಗ್ಗದ ಬೆಲೆಯಲ್ಲಿ ಮೀನು ದೊರಕುತ್ತಿರುವುದರಿಂದ ಗ್ರಾಹಕರು ಮುಗಿಬಿದ್ದು ಕೊಳ್ಳುತ್ತಿದ್ದಾರೆ ಈ ಬೆಳವಣಿಗೆ ನಮಗೂ ಗ್ರಾಹಕರಿಗೂ ಇಬ್ಬರಿಗೂ ಒಳ್ಳೆಯದು
ಸಲೀಂ. ಮೀನು ವ್ಯಾಪಾರಗಾರ.