ಜಿಲ್ಲೆ

ತರಕಾರಿಗಾಗಿ ಮುಗಿಬಿದ್ದ ಮಹಿಳೆಯರು

ಧಾರವಾಡ: ಲಾಕ್​ಡೌನ್ ಮಧ್ಯೆಯೂ ಪಾಲಿಕೆಯ ಮಾಜಿ ಸದಸ್ಯರೊಬ್ಬರು ನೂರಾರು ಮಹಿಳೆಯರು, ಮಕ್ಕಳನ್ನು ಸೇರಿಸಿ ತರಕಾರಿ ವಿತರಿಸಿದ ಘಟನೆ ಇಲ್ಲಿನ ಹೊಸಯಲ್ಲಾಪುರದಲ್ಲಿ ಭಾನುವಾರ ಸಂಜೆ ನಡೆದಿದೆ.

ಪಾಲಿಕೆ ಮಾಜಿ ಸದಸ್ಯ ಶಂಕರ ಶೆಳಕೆ ಇಲ್ಲಿನ ಹೊಸಯಲ್ಲಾಪುರದ ಮಂಗ್ಯಾನ ಮಹಲ್ ಬಳಿ ಉಚಿತವಾಗಿ ತರಕಾರಿ ವಿತರಿಸಿದರು.

ವಾಹನಗಳಲ್ಲಿ ತರಕಾರಿ ತಂದ ಶಂಕರ ಶೆಳಕೆ, ಮಂಗ್ಯಾನ ಮಹಲ್ ಬಳಿಯ ಸಭಾಭವನವೊಂದರಲ್ಲಿ ವಿತರಣೆಗೆ ಮುಂದಾದಾಗ ಕೆಲವರು ಮುಖಕ್ಕೆ ಮಾಸ್ಕ್ ಸಹ ಹಾಕಿಕೊಳ್ಳದೇ ಧಾವಿಸಿ ಬಂದರು. ಕೆಲವರು ಕರವಸ್ತ್ರ, ಸೀರೆ ಸೆರಗಿನಿಂದ ಮುಖ ಮುಚ್ಚಿಕೊಂಡಿದ್ದರು. ಉಚಿತ ತರಕಾರಿಗಾಗಿ ಮುಗಿಬಿದ್ದಾಗ ಪರಸ್ಪರರ ಮಧ್ಯೆ ಅರ್ಧ ಅಡಿ ಅಂತರವೂ ಇರಲಿಲ್ಲ.

ಇದೇ ಹೊಸಯಲ್ಲಾಪುರ ಪ್ರದೇಶದಲ್ಲಿ ಓರ್ವ ವ್ಯಕ್ತಿಗೆ ಕರೊನಾ ದೃಢಪಟ್ಟಿದ್ದು, ಅಲ್ಲಿಂದ ಕೂಗಳತೆ ದೂರದಲ್ಲಿ ತರಕಾರಿ ವಿತರಣೆಗೆ ನೂರಾರು ಜನ ಸೇರಿದ್ದರಿಂದ ಪ್ರಜ್ಞಾವಂತರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

EndFragment