ಜಿಲ್ಲೆ

ತರಕಾರಿ ವ್ಯಾಪಾರಸ್ಥರಿಗೆ ತ್ಯಾಜ್ಯ ಕೇಂದ್ರವಾದ ಪ್ರೌಢ ಶಾಲೆ


ಶಹಾಬಾದ್: ನಗರದ ತರಕಾರಿ ವ್ಯಾಪಾರಸ್ಥರು ತ್ಯಾಜ್ಯವನ್ನು ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಚೆಲ್ಲುವ ಮೂಲಕ ಶಾಲೆ ಆವರಣ ತ್ಯಾಜ್ಯ ಚೆಲ್ಲುವ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ತರಕಾರಿ ವ್ಯಾಪಾರಕ್ಕೆ, ಭೆಂಡಿ ಬಜಾರ ಸ್ಥಳ ಸಂಪೂರ್ಣ ಇಕ್ಕಟ್ಟಾಗಿದ್ದರಿಂದ, ಹರಾಜು ಪ್ರಕ್ರಿಯೆ ನಡೆಸಲು ತಾಲೂಕು ಆಡಳಿತ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಅವಕಾಶ ನೀಡಿ, ಅಲ್ಲಿ ಹರಾಜು ಪ್ರಕ್ರಿಯೆ ನಡೆಸಿ, ನಂತರ ತಳ್ಳುಗಾಡಿಗಳ ಮೂಲಕ ಬಡಾವಣೆಗಳಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿತ್ತು.
ವ್ಯಾಪಾರಸ್ಥರು ಎರಡು ತಿಂಗಳನಿಂದ ಇಲ್ಲಿಯೇ ತರಕಾರಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ. ಕೆಟ್ಟು ಹೋಗಿದ್ದನ್ನು ಶಾಲೆ ಆವರಣದಲ್ಲಿಯೇ ಬಿಸಾಡಿ ಹೋಗಿದ್ದರಿಂದ ಸಂಪೂರ್ಣ ಮಲೀನವಾಗಿದೆ. ಕೊಳೆತ ಕ್ಯಾಬೇಜ್ ಚೆಲ್ಲಿದ್ದರಿಂದ ದುರ್ವಾಸನೆ ಹರಡುತ್ತಿದೆ. ಇನ್ನೊಂದೆಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಇನ್ನಷ್ಟು ವಾತಾವರಣ ಮಲೀನಗೊಳಿಸಿದ್ದಾರೆ. ಶಾಲೆ ಆವರಣದಲ್ಲಿ ಹಚ್ಚಿದ್ದ ಗಿಡಗಳನ್ನು ಅಡ್ಡಾದಿಡ್ಡಿ ವಾಹನಗಳನ್ನು ಓಡಾಡಿಸಿ ಮುರಿದು ಹಾಕಿದ್ದು, ಒಟ್ಟಾರೆ ಶಾಲೆಯ ವಾತಾವರಣ ಕಲುಷಿತಗೊಳಿಸಿದ್ದಾರೆ. ಇದೇ ಸಂದರ್ಭ ಬಳಿಸಿಕೊಂಡ ಕೆಲ ಕುಡುಕರು, ಕುಡಿತ ಬಾಟಲಿಗಳನ್ನು ಶಾಲಾ ಆವರಣದಲ್ಲಿ ಚೆಲ್ಲಿ ಹೋಗಿ ವಾತಾವರಣ ಮಷತ್ತಷ್ಟು ಕೆಡಿಸಲು ಕೈ ಜೋಡಿಸಿದ್ದಾರೆ.