ಹಂದನಕೆರೆ: ತುಮಕೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಹಂದನಕೆರೆ ಹೋಬಳಿ ದಾಸಿಹಳ್ಳಿ ಗೇಟು&ತಮ್ಮಡಿಹಳ್ಳಿ&ಬೆನಕನ ಕಟ್ಟೆ&ಗುಡದಟ್ಟಿ ಮಂಚಸಂದ್ರ ಕುಪ್ಪೂರು ಮಾರ್ಗದಲ್ಲಿ ಸ್ವಾತಂತ್ರ$್ಯ ಬಂದಾಗಿ ನಿಂದಲೂ ಸಾರಿಗೆ ಸೌಲಭ್ಯವೇ ಕಂಡಿಲ್ಲ.
ದಾವಣದ ಹೊಸಳ್ಳಿ--& ಕಾಮಲಾಪುರ& ಹೊಸೂರು& ದಗ್ಗೇನಹಳ್ಳಿ& ಬರಣಾಪುರ ಮಾರ್ಗವಾಗಿ ತಮ್ಮಡಿಹಳ್ಳಿ&ಕುಪ್ಪೂರು ಮಾರ್ಗದಲ್ಲಿ ಬಸ್ ಸೌಲಭ್ಯ ಒದಗಿಸುವಂತೆ ಸದರಿ ಭಾಗದ ಜನ, ವಿದ್ಯಾರ್ಥಿಗಳು ಸ್ಥಳಿಯ ಶಾಸಕರು, ಕೇಂದ್ರ ಮಂತ್ರಿಗಳು, ಕೆಎಸ್ಆರ್ಟಿಸಿ ಅಧಿಕಾರಿ ಗಳಿಗೆ ಸತತವಾಗಿ ಮನವಿ ಮಾಡುತ್ತಿದ್ದರೂ ಪ್ರಯೋಜನವೇ ಆಗಿಲ್ಲ. ನೆರೆಯ ಹಾಸನ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹಂದನಕೆರೆ ತುಮಕೂರಿನಿಂದ ಬರೋಬ್ಬರಿ 110ಕಿಮೀ ದೂರದಲ್ಲಿದ್ದು, ಈ ಭಾಗದಲ್ಲಿ ಬಸ್ ಸೌಲಭ್ಯ ನೀಡುವಂತೆ ಕೆಎಸ್ಆರ್ಟಿಸಿ ವಿಭಾಗಾಧಿಕಾರಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆನಕನಕಟ್ಟೆ, ತಮ್ಮಡಿಹಳ್ಳಿ ಜನ ಚಿಕ್ಕನಾಯಕನಹಳ್ಳಿ ತಲುಪಲು 5ಕಿಮೀ ದೂರದ ಕುಪ್ಪೂರು ತಲುಪಿ ಅಲ್ಲಿಂದ ಬಸ್ ಸೌಲಭ್ಯ ಪಡೆಯಬೇಕು, ತಿಪಟೂರು ಅಥವಾ ಹುಳಿಯಾರು ಕಡೆ ತೆರಳಲು 5ಕಿಮೀ ದೂರದ ಬರಣಾಪುರ ತಲುಪಬೇಕು, ವಿದ್ಯಾರ್ಥಿಗಳು ಶಾಲೆ, ಕಾಲೇಜು ತಲುಪಲು ನೇರವಾಗಿ ಬಸ್ ಸೌಲಭ್ಯವಿಲ್ಲ. ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ, ತಿಪಟೂರು ಅಥವಾ ಹುಳಿಯಾರು ತಲುಪಲು ಸಾಹಸಪಡಬೇಕಾದ ಸ್ಥಿತಿಯಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಿಂದ ಬೆಂಗಳೂರಿಗೆ ಪ್ರತಿದಿನ ನೂರಾರು ಬಸ್ಗಳು ಹುಳಿಯಾರು ಮಾರ್ಗದಲ್ಲಿ ಬೆಂಗಳೂರಿಗೆ ತೆರಳುತ್ತವೆ, ಈ ಬಸ್ಗಳ ಪೈಕಿ ಮೂರು, ನಾಲ್ಕು ಬಸ್ಗಳನ್ನಾದರೂ ಗವಿರಂಗಾಪುರಬೆಟ್ಟ ಮಾರ್ಗವಾಗಿ ಹಂದನಕೆರೆ, ಮತಿಟ್ಟ, ಕಾಮಲಾಪುರ, ತಮ್ಮಡಿಹಳ್ಳಿ, ಕುಪ್ಪೂರು ಮೂಲಕ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸಲು ಅವಕಾಶವಿದ್ದು, ಕೆಎಸ್ಆರ್ಟಿಸಿ ಅಧಿಕಾರಿಗಳು ಮನಸ್ಸು ಮಾಡಬೇಕಿದೆ.
ತಮ್ಮಡಿಹಳ್ಳಿ, ಬೆನಕನಕಟ್ಟೆ, ಮಂಚಸಂದ್ರ, ದಾಸಿಹಳ್ಳಿ ಗ್ರಾಮಗಳಲ್ಲಿ ಸ್ವತಂತ್ರ$್ಯ ಬಂದಾಗಿ ನಿಂದಲೂ ಸಾರಿಗೆ ಸೌಲಭ್ಯವೇ ಇಲ್ಲ, ಬಡಜನರು, ವಿದ್ಯಾರ್ಥಿಗಳು ಓಡಾಡಲು ಕನಿಷ್ಟ ಒಂದು ಬಸ್ ಕೂಡ ಬರುವುದಿಲ್ಲ ಎಂಬುದು ನಾಗರಿಕ ಸಮಾಜದಲ್ಲಿ ಬೇಸರದ ವಿಷಯ. ಬಸ್ ಸೌಲಭ್ಯ ಒದಗಿಸಬೇಕಾದ ಅಗತ್ಯದ ಬಗ್ಗೆ ವಿವರಿಸಿ ಬಸ್ ಬಿಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
| ರಮೇಶ್ ಗ್ರಾಪಂ ಮಾಜಿ ಅಧ್ಯಕ್ಷ, ಬೆನಕನಕಟ್ಟೆ