ಜಿಲ್ಲೆ

ತಮಿಳುನಾಡಿಗೆ ನೀರು ಬಂದ್

ಕೆ.ಆರ್.ಸಾಗರ: ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಗುರುವಾರ ಬಂದ್ ಮಾಡಲಾಯಿತು. ಆದರೆ ನಾಲೆಗಳಿಗೆ ಮತ್ತು ಕೆರೆ-ಕಟ್ಟೆಗಳಿಗೆ 5746 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.


ಅಣೆಕಟ್ಟೆಯಿಂದ ಪ್ರತಿದಿನ 10 ರಿಂದ 12 ಸಾವಿರ ಕ್ಯೂಸೆಕ್ ನೀರನ್ನು ಕಳೆದ 10 ದಿನಗಳಿಂದ ತಮಿಳುನಾಡಿಗೆ ಬಿಡಲಾಗುತ್ತಿತ್ತು. ಇಲ್ಲಿತನಕ ಕೆ.ಆರ್.ಸಾಗರದಿಂದ ಸುಮಾರು 9.5 ಟಿ.ಎಂ.ಸಿ. ನೀರು ಹರಿದಿರುವ ಸಾಧ್ಯತೆ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ 102.90 ಅಡಿ ನೀರಿದೆ. ಒಳಹರಿವು 3516 ಕ್ಯೂಸೆಕ್ ಇದೆ. ಜಲಾಶಯದಲ್ಲಿ 15 ದಿನಗಳ ಹಿಂದಷ್ಟೇ 113 ಅಡಿ ನೀರು ಸಂಗ್ರಹ ಇತ್ತು.


ಜಲಾಶಯದಲ್ಲಿ ಸದ್ಯಕ್ಕೆ 25 ಟಿಎಂಸಿಯಷ್ಟೇ ನೀರು ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ಮಳೆ ಬೀಳದಿದ್ದರೆ ಡಿಸೆಂಬರ್‌ನಿಂದಲೇ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸನ್ನಿವೇಶ ಎದುರಾಗಿದೆ. ಬೇಸಿಗೆಯಲ್ಲಂತೂ ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಉಂಟಾಗುವ ಸಾಧ್ಯತೆ ಎದುರಾಗಿದೆ.