ಸಾಗರ: ನಗರಸಭೆಯಲ್ಲಿ ಎಲ್ಲರ ವಿಶ್ವಾಸ ಪಡೆದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೇವೆ. ನಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದೆ ಇದ್ದರೆ ಹೇಳಿ. ನಾವೆಲ್ಲ ಅಕಾರಿ, ಸಿಬ್ಬಂದಿ ಹೊರಗೆ ಹೋಗುತ್ತೇವೆ. ನಾವು ತಪ್ಪು ಮಾಡಿದ್ದರೆ ಎಂತಹ ತನಿಖೆಗೂ ಸಿದ್ಧರಿದ್ದೇವೆ. ಸುಳ್ಳು ಆರೋಪಗಳನ್ನು ಸಹಿಸಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರು ನೀಡಿದ ಹೇಳಿಕೆ ಸದಸ್ಯರನ್ನು ಒಮ್ಮೆ ತಬ್ಬಿಬ್ಬುಗೊಳಿಸಿತು. ಶುಕ್ರವಾರ ನಡೆದ ನಗರಸಭೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ಹೊರಹಾಕಿದ ನಾಗಪ್ಪ, ಜಿಲ್ಲಾಕಾರಿಗಳ ಕಚೇರಿಯ ನಗರ ಯೋಜನಾಕಾರಿಗೆ ಸದಸ್ಯರೊಬ್ಬರು ೆನ್ ಮೂಲಕ ಮಾತನಾಡಿ, ಸ್ವಚ್ಛತೆ ಕಾರ್ಯದಲ್ಲಿ ನಗರಸಭೆ ಅಕಾರಿಗಳು ಸುಳ್ಳು ಲೆಕ್ಕ ತೋರಿಸಿದ್ದಾರೆ. ಬಿಲ್ ಪಾಸ್ ಮಾಡಬೇಡಿ. ನಾವು ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವು ಸುಳ್ಳು ಲೆಕ್ಕ ಕೊಟ್ಟ ಒಂದೇ ಒಂದು ಉದಾಹರಣೆ ನಮಗೆ ತೋರಿಸಿ ಎಂದು ಭಾವುಕರಾದರು. ಪೌರಾಯುಕ್ತ ನಾಗಪ್ಪ ಅವರಿಗೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಬೆಂಬಲ ಸೂಚಿಸಿದರು. ಟಿ.ಡಿ.ಮೇಘರಾಜ್ ಮಾತನಾಡಿ, ಊರಿನ ಅಭಿವೃದ್ಧಿಯಲ್ಲಿ ಸಾಗರದ ಪೌರಾಯುಕ್ತರಿಗೆ ವಿಶೇಷ ಕಾಳಜಿ ಇದೆ. ನಗರಸಭೆಯಲ್ಲಿ ನಡೆಯುವ ವಿಷಯವನ್ನು ಜಿಲ್ಲಾಕಾರಿಗಳ ಕಚೇರಿವರೆಗೆ ದೂರು ಒಯ್ಯುವುದು ಸರಿಯಲ್ಲ. ಏನೇ ಇದ್ದರೂ ವಿಷಯ ಸಭೆಯಲ್ಲಿ ಇತ್ಯರ್ಥವಾಗಬೇಕು ಎಂದರು. ಮಧುರಾ ಶಿವಾನಂದ್ ಮಾತನಾಡಿ, ಪೌರ ಕಾರ್ಮಿಕರ ಕೊರತೆ ಇದ್ದಾಗ ಪೌರಾಯುಕ್ತರು ಆನವಟ್ಟಿ, ತ್ಯಾಗರ್ತಿಯಿಂದ ಕಾರ್ಮಿಕರನ್ನು ಕರೆಸಿ ಸ್ವಚ್ಛತೆ ಮಾಡಿಸಿದ್ದಾರೆ. ನಮ್ಮ ಅಕಾರಿ, ಸಿಬ್ಬಂದಿಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಪೌರಾಯುಕ್ತರ ಜತೆ ನಾವಿದ್ದೇವೆ. ಜಿಲ್ಲಾಕಾರಿಗಳಿಗೆ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಎನ್.ಲಲಿತಮ್ಮ ಮಾತನಾಡಿ, ಸಮಸ್ಯೆ ಇದ್ದರೆ ಸಭೆಯಲ್ಲಿ ಚರ್ಚೆ ಮಾಡುವುದು ಒಳ್ಳೆಯದು. ಒಟ್ಟಾರೆ ವ್ಯವಸ್ಥೆ ಸರಿಯಾಗಿ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು. ಸದಸ್ಯ ಶ್ರೀನಿವಾಸ್ ಮಾತನಾಡಿ, ಗಣಪತಿ ಹಬ್ಬ ಬರುತ್ತಿದೆ. ಸ್ವಚ್ಛತೆ ಬಗ್ಗೆ ನಿರ್ಲಕ್ಷ ತೋರುವುದು ಬೇಡ. ನಮ್ಮ ನಗರಸಭೆಗೆ ಹಣ ಬಿಡುಗಡೆ ಮಾಡಬೇಡಿ ಎಂದು ಯೋಜನಾ ನಿರ್ದೇಶಕರಿಗೆ ಕರೆಮಾಡಿರುವುದು ತಪ್ಪು ಎಂದರು. ಸದಸ್ಯ ಎಲ್.ಚಂದ್ರಪ್ಪ ಮಾತನಾಡಿ, ಸಾಗರ ನಗರದ ಸ್ವಚ್ಛತೆ ಬಗ್ಗೆ ಉತ್ತಮ ಕೆಲಸ ನಡೆಯುತ್ತಿದೆ. ಪೌರಾಯುಕ್ತರು, ಅಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಸದಸ್ಯರು, ಅಕಾರಿಗಳು ಹಾಜರಿದ್ದರು.
ಸಮಸ್ಯೆ ಏನೇ ಇದ್ದರೂ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಬಹುದು. ಮನವಿ ಕೊಡಬಹುದು. ಆದರೆ ಏಕಾಏಕಿ ಜಿಲ್ಲಾಕಾರಿ ಕಚೇರಿಗೆ ದೂರು ಕೊಡುವುದು ನಗರಸಭೆ ಆಡಳಿತಕ್ಕೆ ಅಗೌರವ ತೋರಿದಂತೆ. ಇಂತಹ ಘಟನೆ ಮುಂದೆ ನಡೆಯದಂತೆ ಎಲ್ಲ ಸದಸ್ಯರು ಗಮನ ಹರಿಸಬೇಕು. ಸಾಗರ ನಗರಸಭೆಯ ಆಡಳಿತ ಅಕಾರಿಗಳ ಅವ ಇದ್ದಾಗ 24 ತಿಂಗಳು ಮಂಡನೆ ಆಗದ ಲೆಕ್ಕಪತ್ರಗಳ ಬಗ್ಗೆ ಹಂತ ಹಂತವಾಗಿ ಸಾಮಾನ್ಯ ಸಭೆ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಮೈತ್ರಿ ಪಾಟೀಲ್, ನಗರಸಭೆ ಅಧ್ಯಕ್ಷೆ ಫ್ಲೆಕ್ಸ್ ವಿಚಾರದಲ್ಲಿ ಮಾತಿನ ಚಕಮಕಿ ಸಿಗಂದೂರು ಸೇತುವೆ ಲೋಕಾರ್ಪಣೆ ಸಂದರ್ಭ ಕೇಂದ್ರ ನಾಯಕರನ್ನು ಸ್ವಾಗತಿಸಲು ಹಾಕಿದ್ದ ್ಲೆಕ್ಸನ್ನು ಬೆಳಗಾಗುವಷ್ಟರಲ್ಲಿ ತೆಗೆಸಿದ್ದು ಅಗೌರವ ಸೂಚಿಸಿದಂತೆ ಎಂದು ಟಿ.ಡಿ.ಮೇಘರಾಜ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇತರ ಸದಸ್ಯರು, ಬೇರೆಯವರ ಫ್ಲೆಕ್ಸ್‌ಗಳನ್ನು ಮೂರು ತಿಂಗಳಾದರೂ ತೆಗೆಸುವುದಿಲ್ಲ. ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು. ಗಣಪತಿ ಮಂಡಗಳಲೆ ಪ್ರತಿಕ್ರಿಯಿಸಿ ಕಾರ್ಯಕ್ರಮ ಮುಗಿದ ನಂತರ ಫ್ಲೆಕ್ಸ್ ತೆಗೆಸಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಇದರಿಂದ ಆಡಳಿತ ಬಿಜೆಪಿ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.