ಬೆಳಗಾವಿ: ಜಗತ್ತಿನಲ್ಲಿ ಪ್ರತಿಯೊಬ್ಬರು ತಪ್ಪು ಮಾಡುವುದು ಸಹಜ. ಆದರೆ, ಮಾಡಿದ ತಪ್ಪನ್ನು ಪುನರಾವರ್ತಿಸದೇ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಅಡವಿಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಈಚೆಗೆ ಕಾನೂನು ಅರಿವು ಹಾಗೂ ಮನ@ಪರಿವರ್ತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಜನ್ಮ ಬಹಳ ದೊಡ್ಡದು ಅದನ್ನು ವ್ಯರ್ಥ ಮಾಡಬೇಡಿ. ಕಾರಾಗೃಹವನ್ನು ಸಾಧನೆಯ ೇತ್ರ ಎಂದು ಭಾವಿಸಿ ಇಲ್ಲಿರುವ ಸಮಯವನ್ನು ಉತ್ತಮ ಕಾರ್ಯಕ್ಕಾಗಿ ಬಳಸಿ. ತಾವೆಲ್ಲ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಿಡುಗಡೆ ನಂತರ ಸಮಾಜದಲ್ಲಿ ಸತಜೆಗಳಾಗಿ ಬಾಳಬೇಕು ಎಂದು ಕರೆ ನೀಡಿದರು.
ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ತಾವೆಲ್ಲ ತಮ್ಮ ಜೀವನದ ಕಹಿ ಳಿಗೆಯಲ್ಲಿ ತಿಳಿದೋ ಅಥವಾ ತಿಳಿಯದೇ ತಪ್ಪು ಮಾಡಿ ಶಿೆ ಅನುಭವಿಸುತ್ತಿರಬಹುದು. ಆದರೆ ಇದು ಕೇವಲ ತಾತ್ಕಾಲಿಕ ಮಾತ್ರ. ಇಲ್ಲಿಂದ ಬಿಡುಗಡೆಯಾಗಿ ಹೋಗಲೆಬೇಕು. ಹಾಗೆ ಇನ್ಮುಂದೆ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳುತ್ತೇನೆ ಎಂಬ ದೃಢ ನಿರ್ಧಾರ ಮಾಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮುರಳಿ ಮೋಹನ ರೆಡ್ಡಿ ಮಾತನಾಡಿದರು.ಅಖಿಲ ಭಾರತ ಮಾನವ ಹಕ್ಕುಗಳ ರಾಜ್ಯ ಕಾರ್ಯದರ್ಶಿ ಸದಾನಂದ ಪಾಟೀಲ, ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ. ಕೃಷ್ಣಮೂರ್ತಿ, ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ, ಬಿ.ಜಿ.ಧಾರವಾಡ, ಆರ್.ಬಿ.ಪಾಟೀಲ, ಎಸ್.ಬಿ.ಪಾಟೀಲ ಇತರರಿದ್ದರು.