ಜಿಲ್ಲೆ

ತತ್ವಪದಕಾರರಿಂದ ಜನರ ಬದುಕು ಹಸನ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏಪ್ರಿಲ್ ಕೊನೆ ವಾರದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲು ಉz್ದÉÃಶಿಸಲಾಗಿರುವ ಜಿಲ್ಲಾ ಮಟ್ಟದ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ಆಯ್ಕೆಗೊಂಡ ಸಹಕಾರಿ ಧುರೀಣ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ ಅವರನ್ನು ನಗರದ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕೃತ ಆಹ್ವಾನ ನೀಡಿ, ಸತ್ಕರಿಸಲಾಯಿತು.
ಕಡಕೋಳ ಮಠದ ಡಾ.ರುದ್ರಮುನಿ ಶಿವಾಚಾರ್ಯರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಜರುಗಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಜನರ ಬದುಕು ತಿದ್ದಿ ತೀಡಿ ಹಸನಾಗಿಸಲು ತತ್ವಪದಗಳು ತುಂಬಾ ಪರಿಣಾಮ ಬೀರಿದ ಮೌಲ್ಯಗಳಾಗಿವೆ. ತತ್ವಪದಕಾರರು ಸಾಮಾಜ ಸುಧಾರಣೆಯ ಮೂಲಕ ಜನ ಸಾಮಾನ್ಯರ ಜೀವನ ಮಟ್ಟ ಶುದ್ಧಿಗೊಳಿಸಲು ಶ್ರಮಿಸಿದವರು. ಅವರ ತÀತ್ವಪದಗಳು ಇಂದಿಗೂ ನಮ್ಮ ಸಂಕೀರ್ಣ ವ್ಯವಸ್ಥೆಗೆ ಕನ್ನಡಿಯಂತಾಗಿವೆ. ಕಲಬುರಗಿ ಜಿಲ್ಲೆಯಲ್ಲಿ ಅನೇಕ ತತ್ವಪದಕಾರರು ಬಾಳಿ ಹೋಗಿದ್ದಾರೆ. ಅವರ ಈ ಸಾಹಿತ್ಯ ಉಳಿಸಿ ಬೆಳೆಸಿಕೊಂಡು ಬರುವವರಲ್ಲಿ ತತ್ವಪದ ಕಲಾವಿದರು ಅಷ್ಟೇ ಪ್ರಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಸಂಗಾವಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಹೋರಾಟಗಾರ ರವಿ ಮದನಕರ್, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಸಾಹಿತಿ ಡಾ.ಸೂರ್ಯಕಾಂತ ಪಾಟೀಲ್ ಸರಸಂಬಾ, ಉಪನ್ಯಾಸಕ ಧರ್ಮರಾಜ ಜವಳಿ, ಪ್ರಮುಖರಾದ ಚನ್ನಮಲ್ಲಯ್ಯಾ ಹಿರೇಮಠ, ರವೀಂದ್ರಕುಮಾರ ಭಂಟನಳ್ಳಿ, ಗಣೇಶ ಚಿನ್ನಾಕಾರ, ಸುರೇಖಾ ಜೇವರ್ಗಿ, ಸಿದ್ಧಲಿಂಗ ಬಾಳಿ, ಶಿವಾನಂದ ಮಠಪತಿ, ವಿನೋದಕುಮಾರ ಜೇನವೇರಿ, ಎಸ್.ಕೆ.ಬಿರಾದಾರ್, ಶಾಂತಲಿAಗ ಪಾಟೀಲ ಕೋಳಕೂರ, ಮಹೇಶ ಚಿಂತನಪಳ್ಳಿ, ರಾಜೇಂದ್ರ ಮಾಡಬೂಳ, ಎಂ.ಎನ್.ಸುಗAಧಿ, ವಿಶ್ವನಾಥ ತೊಟ್ನಳ್ಳಿ, ವಿಜಯಕುಮಾರ ಬಿರಾದಾರ್, ಸಂತೋಷ ಕುಡಳ್ಳಿ, ಶಿವಶಂಕರ ವರ್ಮಾ, ಎಚ್.ಎಸ್.ಬರಗಾಲಿ, ಶಿವಾನಂದ ಪೂಜಾರಿ ಇತರರಿದ್ದರು.