ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಜೋಡಿವಡ್ಡರಹಳ್ಳಿ ಗ್ರಾಮದ ತತ್ವಪದ ಗಾಯಲ ವೀರಭದ್ರಪ್ಪ ಅವರಿಗೆ 2023ನೇ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದುಬಂದಿದೆ.
ವೀರಭದ್ರಪ್ಪ ಅವರು 1964ರಲ್ಲಿ ಜನಿಸಿದರು. ವಂಶಪಾರಂಪರ್ಯವಾಗಿ ಇವರ ತಂದೆ, ತಾತಾ ಎಲ್ಲರೂ ತತ್ವಪದ ಹಾಗೂ ಚರ್ಮವಾದ್ಯ ಕಲಾವಿದರಾಗಿದ್ದರು. ತಂದೆ ಕರಿಯಯ್ಯ ಅವರು ಹಾಡುತ್ತಿದ್ದ ಜನಪದ ಗೀತೆಗಳು, ತತ್ವಪದಗಳು ಹಾಗೂ ಚರ್ಮವಾದ್ಯಗಳನ್ನು ನುಡಿಸುವುದು ಬಾಲ್ಯದಿಂದಲೇ ರೂಢಿಸಿಕೊಂಡು ಕರಗತ ಮಾಡಿಕೊಂಡರು. ಅಪ್ಪ ಹಾಡುತ್ತಿದ್ದ ಹಾಡುಗಳನ್ನು ಕೇಳುತಾ ್ತ ಬೆಳೆದರು. ನಂತರ ಭಜನೆ ತಂಡಗಳ ಬೆನ್ನು ಹತ್ತಿ ಹಾಡುಗಳನ್ನು ಕೇಳುತ್ತಿದ್ದರು. ಎಲ್ಲಿಯಾದರೂ ತತ್ವಪದಗಳ ಕಾರ್ಯಕ್ರಮ ನಡೆದರೆ ಅಲ್ಲಿಗೆ ಹೋಗಿ ಬರುವುದು ಅಭ್ಯಾಸವಾಯಿತು.
ತಂದೆ ತೀರಿಕೊಂಡ ಮೇಲೆ ಈ ಕಲೆಯನ್ನು ವೀರಭದ್ರಯ್ಯ ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು 45 ವರ್ಷ ಳಿಂದ ತತ್ವಪದ ಹಾಡುತ್ತಾ, ಚರ್ಮವಾದ್ಯಗಳನ್ನು ನುಡಿಸುತ್ತ ಬಂದಿದ್ದಾರೆ. ವೀರಭದ್ರಯ್ಯ ಅವರು ಏಕತಾರಿಯನ್ನು ನುಡಿಸುವುದರ ಜತೆಗೆ ಅದ್ಭುತವಾಗಿ ಹಾರ್ಮೋನಿಯಂ ನುಡಿಸುತ್ತಾರೆ.
ಅರಕಲಗೂಡು, ಸಕಲೇಶಪುರ, ಹೊಳೆನರಸೀಪುರ, ಬೇಲೂರು ತಾಲೂಕುಗಳಲ್ಲಿ 20ಕ್ಕೂ ಹೆಚ್ಚು ಪೌರಾಣಿಕ ನಾಟಕಗಳನ್ನು ಕಲಿಸಿದ್ದಾರೆ. ಕಳೆದ 45 ವರ್ಷಗಳಿಂದ ತತ್ವಪದ ಕಲಾವಿದರಾಗಿ ಜಾನಪದ ಪರಂಪರೆ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ. ಇವರಿಗೆ ಹಲವು ಪ್ರಶಸ್ತಿ ಅರಸಿ ಬಂದಿದ್ದು, ಇದೀಗ ಇವರ ಕಲೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ 2023ರ ಅಕಾಮಿಡೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.