ಎಂ.ಕೆ.ಹುಬ್ಬಳ್ಳಿ ಪಪಂ ಮುಖ್ಯಾಕಾರಿ ಎದುರು ಅಳಲು ತೋಡಿಕೊಳ್ಳುತ್ತಿರುವ ವಾರ್ಡ್ ನಂ-3ರ ನಿವಾಸಿಗಳು. ನಿವಾಸಿಗಳಾದ ಅನ್ನಪೂರ್ಣಾ ಗೊಡಚಿ, ಶೋಭಾ ಭೋವಿ, ಲಕ್ಷ್ಮೀ ವಿಭೂತಿಮಠ, ನಿರ್ಮಲಾ ಹುಣಶೀಕಟ್ಟಿ, ನೀಲವ್ವ ಸಂಬಣ್ಣವರ, ಕವಿತಾ ಸುಣಗಾರ, ಜ್ಯೋತಿ ಸುಣಗಾರ, ಮಂಜುಳಾ ರಾವ್ ಇತರರಿದ್ದಾರೆ. 
ಜಿಲ್ಲೆ

ತಗ್ಗು ಸರಿಯಾಗಿ ಮುಚ್ಚಲು ಆಗ್ರಹ

ಎಂ.ಕೆ.ಹುಬ್ಬಳ್ಳಿ: ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ಅಗೆಯಲಾದ ತಗ್ಗು-ಗುಂಡಿಗಳಿಂದ ರಸ್ತೆಯಲ್ಲ ಕೆಸರು ಗದ್ದೆಯಂತಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪಟ್ಟಣದ ವಾರ್ಡ್ ನಂ.3ರ ಬಸವನ ನಗರದ 5ನೇ ಕ್ರಾಸ್ ನಿವಾಸಿಗಳು ಸ್ಥಳೀಯ ಪಟ್ಟಣ ಪಂಚಾಯಿತಿಗೆ ತೆರಳಿ ಶನಿವಾರ ಆಕ್ರೋಶ ಹೊರಹಾಕಿದರು.
ಪಪಂ ಮುಖ್ಯಾಕಾರಿ ಶರಣಬಸಯ್ಯ ಎದುರು ಅಳಲು ತೋಡಿಕೊಂಡ ನಿವಾಸಿಗಳು, ಅಗೆದು ಮುಚ್ಚಿರುವ ತಗ್ಗಿನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು, ರಸ್ತೆ ಕೆಸರುಮಯವಾಗಿದೆ. ಗುತ್ತಿಗೆದಾರರಿಗೆ, ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಕಾರಿ ಶರಣಬಸಯ್ಯ, ನಿವಾಸಿಗಳ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಗುತ್ತಿಗೆದಾರನಿಗೆ ಆಗಿರುವ ಸಮಸ್ಯೆ ಸರಿಪಡಿಸಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ನಿವಾಸಿಗಳಾದ ಅನ್ನಪೂರ್ಣಾ ಗೊಡಚಿ, ಶೋಭಾ ಭೋವಿ, ಲಕ್ಷ್ಮೀ ವಿಭೂತಿಮಠ, ನಿರ್ಮಲಾ ಹುಣಶೀಕಟ್ಟಿ, ನೀಲವ್ವ ಸಂಬಣ್ಣವರ, ಕವಿತಾ ಸುಣಗಾರ, ಜ್ಯೋತಿ ಸುಣಗಾರ, ಮಂಜುಳಾ ರಾವ್, ಸಾಹೇಬಿ ನದ್ಾ, ರುದ್ರಪ್ಪ ಕೊಡ್ಲಿ, ರುದ್ರಯ್ಯ ವಿಭೂತಿಮಠ, ರಮೇಶ ಚಳ್ಳಮರದ, ಪ್ರಕಾಶ ಕರಪತ್ತದೇವರ, ಮಲ್ಲಪ್ಪ ಸುಣಗಾರ, ಚಂದ್ರು ಸುಣಗಾರ, ಪಪಂ ಸದಸ್ಯರಾದ ದೊಡ್ಡಪ್ಪ ಗಣಾಚಾರಿ, ಸುಬಾನಿ ಅಗಸಿಬಾಗಿಲ, ಸುರೇಶ ಮುತ್ನಾಳ, ಸಮೀರ್ ಪಟೇಲ್, ಚೇತನ ದೇಮಟ್ಟಿ ಇತರರಿದ್ದರು.