ಕೋಲಾರ: ತಂಬಾಕು ಸೇವನೆಯು 2030ರ ವೇಳೆಗೆ ವಿಶ್ವಸಂಸ್ಥೆಯು ಅಳವಡಿಸಿಕೊಂಡಿರುವ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಅಘಾತಕಾರಿ ಅಂಶ ಸಮೀೆಯಿಂದ ತಿಳಿದುಬಂದಿದೆ. 2030ರ ವೇಳೆಗೆ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಲು ಗುರಿ ಹೊಂದಿರುವುದರಿಂದ ಸಾರ್ವಜನಿಕರು ಜಾಗೃತರಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಕೆ.ಆರ್. ನಾಗರಾಜ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂ, ಆರೋಗ್ಯ ಇಲಾಖೆಗಳು ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಮಂಗಳವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂಬಾಕು ಸೇವನೆಯಿಂದ ವಿಶ್ವದಲ್ಲಿ 80 ಲಕ್ಷಕ್ಕೂ ಅಧಿಕ ಹಿರಿಯರು ಹಾಗೂ ಅಪ್ರಾಪ್ತ ವಯಸ್ಸಿನವರು ಸಾಯುತ್ತಿದ್ದಾರೆ. ಆದ್ದರಿಂದ, ತಂಬಾಕು ಸೇವನೆ ನಿಲ್ಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಶೇ.60 ಜನರಲ್ಲಿ ಕ್ಯಾನ್ಸರ್: ತಂಬಾಕು ಸೇವನೆಯಿಂದ ಶೇ.60 ಜನರು ಕ್ಯಾನ್ಸರ್ ಇನ್ನಿತರ ಮಾರಕ ರೋಗದಿಂದ ಜೀವ ಕಳೆದುಕೊಳ್ಳತ್ತಿದ್ದಾರೆ. ಸರ್ಕಾರಗಳು ತಂಬಾಕು ನಿಷೇಧಕ್ಕಾಗಿ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದ್ದರೂ, ಜನರಲ್ಲಿ ಇನ್ನೂ ಅರಿವು ಮೂಡಿಲ್ಲ. ಈ ಬಾರಿ ಪರಿಸರವನ್ನು ರಸಿ ಎಂಬ ೂಷವಾಕ್ಯದೊಂದಿಗೆ ವಿಶ್ವ ತಂಬಾಕು ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಜನರ ಪ್ರಾಣ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಆದ್ದರಿಂದ, ಪ್ರತಿೆ ಸ್ವೀಕರಿಸಿ, ಕೋಲಾರವನ್ನು ತಂಬಾಕುಮುಕ್ತಗೊಳಿ, ಕಾನೂನು ಗೌರವಿಸೋಣ ಎಂದು ನ್ಯಾಯಾಧೀಶ ಕೆ.ಆರ್. ನಾಗರಾಜ್ ಹೇಳಿದರು.
ತಂಬಾಕು ಸೇವನೆಯಿಂದ ಅನಾರೊಗ್ಯದ ಜತೆಗೆ ಜೇಬಿಗೂ ಕತ್ತರಿ ಬೀಳುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕುಟುಂಬದಲ್ಲಿ ನೋವು ಹೆಚ್ಚಾಗುತ್ತದೆ, ಸಾರ್ವಜನಿಕರು ಬೀಡಿ, ಸಿಗರೇಟ್ ಹಾಗೂ ಹೊಗೆಸೊಪ್ಪು ಸೇವನೆ ಮಾಡುವವರಿಗೆ ತಿಳಿವಳಿಕೆ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆದು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂದ ಅಧ್ಯಕ್ಷ ಜಿ. ಶೀಧರ್ ಮಾತನಾಡಿದರು. ಸಂದ ಪ್ರಧಾನ ಕಾರ್ಯದರ್ಶಿ ರುಪತಿಗೌಡ, 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ದೇವರಾಜ್, ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ದೇವಮಾನೆ, ಹಿರಿಯ ವಕೀಲ ಧನರಾಜ್, ಡಿಎಚ್ಒ ಡಾ. ಜಗದೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮರಾಜಪ್ಪ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ನಂದೀಶ್, ನಂದಿನಿ ರೋಟರಿ ಕ್ಲಬ್ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಇನ್ನಿತರರು ಇದ್ದರು.
ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನದ ಕಾಲ್ನಡಿಗೆ ಜಾಥಾಕ್ಕೆ ನ್ಯಾಯಾಧೀಶ ಕೆ.ಆರ್. ನಾಗರಾಜ್ ಚಾಲನೆ ನೀಡಿದರು, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಜಿ. ಶ್ರೀಧರ್, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವರಾಜ್, ೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ದೇವಮಾನೆ, ಡಿಎಚ್ಒ ಡಾ. ಜಗದೀಶ್ ಇನ್ನಿತರರು ಇದ್ದರು.