ಸೇಡಂ: ದಿನ ಕಳೆದಂತೆ ಯುವ ಸಮುದಾಯ ದುಶ್ಚಟಗಳತ್ತ ವಾಲುತ್ತಿದ್ದು, ಹೆಚ್ಚೆಚ್ಚು ತಂಬಾಕು ಸೇವನೆ ಮಾಡುತ್ತಿದ್ದಾರೆ. ಇದರಿಂದಾಗಿ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯ ಹಿರಿಯ ವೈದ್ಯ ಡಾ.ವಿಶ್ವನಾಥರೆಡ್ಡಿ ಹೇಳಿದರು.
ವಿಜಯ ಸಭಾಂಗಣದಲ್ಲಿ ಸೇಡಂ ತಾಲೂಕು ವೈದ್ಯರ ಸಂಘ, ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯಿಂದ ಭಾನುವಾರ ರಾತ್ರಿ ಆಯೋಜಿಸಿದ್ದ ದೃಷ್ಟು ದೋಷದ ಕಾರಣ ಮತ್ತು ಪರಿಹಾರ ಕುರಿತ ಸಮಾಲೋಚನೆ ಸಭೆ ಉದ್ಘಾಟಿಸಿ ಮಾತನಾಡಿ, ಮದ್ಯ, ಧೂಮಪಾನದಂತಹ ವ್ಯಸನಗಳಿಂದ ಹಲವು ಕಾಯಿಲೆಗಳು ಎದುರಾಗುತ್ತವೆ. ತಂಬಾಕು ಹಾಗೂ ಸಿಗರೆಟ್ ಹೊಗೆಯಿಂದ ದೃಷ್ಟಿ ದೋಷ ಉಂಟಾಗಲಿದೆ. ಮ್ಯಾಕ್ಯುಲಾರ್ ಡಿಜೆನರೇಶನ್ ಅಥವಾ ಕಣ್ಣಿನ ಕೇಂದ್ರ ಭಾಗದ ಮ್ಯಾಕ್ಯುಲಾ ಎಂಬ ಅತೀ ಸೂಕ್ಷö್ಮ ಭಾಗ ಶೀಘ್ರ ಸವೆಯುತ್ತದೆ ಎಂದು ತಿಳಿಸಿದರು.
ಡಾ.ರಾಜಶ್ರೀ ರೆಡ್ಡಿ ಮಾತನಾಡಿ, ಕಣ್ಣು ಕೆಂಪಾಗುವಿಕೆ ಹಲವು ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ರೀತಿಯ ಸಮಸ್ಯೆ ಹೊಂದಿದವರಲ್ಲಿ ಕೆಲವರಿಗೆ ಯಾವುದೇ ಹಾನಿ ಇಲ್ಲದಿದ್ದರೆ, ಕೆಲವರಿಗೆ ಗಂಭೀರವಾಗಿ ಪರಿಣಮಿಸುತ್ತದೆ. ತುರ್ತು ವೈದ್ಯಕೀಯ ಆರೈಕೆ ಅಗತ್ಯವಿರುತ್ತದೆ ಎಂದರು.
ಡಾ.ನೀತಾಕುಮಾರಿ, ಡಾ.ಶರಣಕುಮಾರ ಮಾತನಾಡಿದರು.
ವೈದ್ಯರ ಸಂಘದ ತಾಲೂಕು ಅಧ್ಯಕ್ಷ ಡಾ.ರಾಜಕುಮಾರ ಬಿರಾದಾರ, ಶ್ರೀ ಸಿದ್ಧರಾಮೇಶ್ವರ ಆಸ್ಪತ್ರೆ ನೇತ್ರ ತಜ್ಞ ಡಾ.ಸಿದ್ದಲಿಂಗರೆಡ್ಡಿ, ಹಿರಿಯ ವೈದ್ಯರಾದ ಡಾ.ಸದಾನಂದ ಬೂದಿ, ಡಾ.ಮುರಳಿಧರ ದೇಶಪಾಂಡೆ, ಡಾ.ಉದಯಕುಮಾರ ಶಹಾ, ಡಾ.ನಿರ್ಮಲಾ ಪಾಟೀಲ್, ಡಾ.ರಾಧಿಕಾ ಶಹಾ, ಡಾ.ಪ್ರವೀಣ ಜೋಶಿ, ಡಾ.ಸದಾನಂದರೆಡ್ಡಿ ಶೇರಿ ಇತರರಿದ್ದರು.