ಜಿಲ್ಲೆ

ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ

ಕುರುಗೋಡು: ವಿವಿಧ ಕಾಯಿಲೆಗೆ ಕಾರಣವಾಗುವ ತಂಬಾಕು ಸೇವನೆ ಸಂಪೂರ್ಣ ತ್ಯಜಿಸಬೇಕು. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ಗಾಯತ್ರಿ ತಿಳಿಸಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಂಬಾಕು ರಹಿತ ದಿನದ ಜಾಗೃತಿ ಜಾಥಾದಲ್ಲಿ ಬುಧವಾರ ಮಾತನಾಡಿದರು.

ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಿಂದ ಸಮುದಾಯ ಆರೋಗ್ಯ ಕೇಂದ್ರದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿತು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಕಚೇರಿ ಅಧೀಕ್ಷಕ ಲೋಕೇಶ್ ಪಂಡಿತ್, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಂದ್ರ, ಶರಣಬಸವ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡಿ.ಸುನಿತಾ, ನೀಲಾವತಿ ಎನ್‌ಸಿಡಿ ವಿಭಾಗದ ಶೇಖರ್, ಕೆ.ಅಬ್ದುಲ್ ಸುಭಾನ್, ಶಿವರಾಜ್, ನೇತ್ರಾವತಿ, ಐಸಿಟಿಸಿ ವಿಭಾಗದ ಎನ್.ಕರಿಬಸವ, ಎಬಿಎಆರ್‌ಕೆ ವಿಭಾಗದ ಶರಣಬಸವ, ನವೀನ್ ಕುಮಾರ್ ಇದ್ದರು.