ಜಿಲ್ಲೆ

ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲು ಶಿಫಾರಸು

ಚಾಮರಾಜನಗರ: ರಾಜ್ಯ ತಂಬಾಕು ನಿಯಂತ್ರಣ ಮಾರ್ಗದರ್ಶನದಂತೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನತಾಳಪುರ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡುವ ಸಂಬಂಧ ಗ್ರಾಮದಲ್ಲಿ ತಂಬಾಕು ಮುಕ್ತ ಗ್ರಾಮದ ಸೂಚಕಗಳನ್ನು ಅನುಷ್ಠಾನಗೊಳಿಸಿದ ಮೇರೆಗೆ ಸೋಮವಾರ ಮೌಲ್ಯಮಾಪನ ತಂಡವು ಬೇವಿನತಾಳಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಎನ್ ಸುಂದರೇಶ್ ಅವರ ನೇತೃತ್ವದಲ್ಲಿ ಬಿಸಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಲ್ಲವಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸ್. ಶಿವಮೂರ್ತಿ, ಚಾಮರಾಜನಗರ ಪೂರ್ವ ಪೋಲೀಸ್ ಠಾಣೆಯ ಉಪ ನಿರೀಕ್ಷಕ ಪ್ರಕಾಶ್, ಗ್ರಾಮದ ಸರ್ಕಾರಿ ಶಾಲೆಯ ಸಹ ಶಿಕ್ಷಕ ಕೃಷ್ಣಮೂರ್ತಿ, ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮೇಲ್ವಿಚಾರಕಿ ಕಸ್ತೂರಿ ಅವರನ್ನೊಳಗೊಂಡ ತಂಡದಿಂದ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ತಂಬಾಕು ಮುಕ್ತ ಗ್ರಾಮದ ಸೂಚಕಗಳ ಮೌಲ್ಯಮಾಪನ ನಡೆಸಲಾಯಿತು ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.