ಜಿಲ್ಲೆ

ತಂಬಾಕು ಮಾರಾಟ ಮಳಿಗೆ ಮೇಲೆ ದಾಳಿ

ಬೀದರ್: ನಗರದ ವಿವಿಧ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಅಧಿಕಾರಿಗಳು ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದ ಒಟ್ಟು 61 ಅಂಗಡಿಗಳಿಗೆ 9800 ರೂ. ದಂಡ ವಿಧಿಸಿದರು.

ನಗರದ ಗಾಂಧಿಗಂಜ್, ಟೌನ್ ಮತ್ತು ಮಾರ್ಕೆಟ್ ಠಾಣೆಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಳಿಗೆ ಮೇಲೆ ದಾಳಿ ನಡೆದಿವೆ. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಎಲ್. ಕೃಷ್ಣಾರೆಡ್ಡಿ ಮಾರ್ಗದರ್ಶನದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ನಗರಸಭೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ ಮತ್ತು ಪೊಲೀಸರ ವತಿಯಿಂದ ತಂಬಾಕು ಜಾಗೃತಿ ದಾಳಿ ಸಂಘಟಿಸಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಸಲಹೆಗಾರ ಪ್ರಕಾಶ ವಗ್ಗೆ, ಮಹೇಶ ಬಬಛಡೆ, ಅರುಣ ಪಾಟೀಲ್, ಆಹಾರ ಸುರಕ್ಷತೆ ಅಧಿಕಾರಿ ಅರವಿಂದ ಡಾಂಗೆ, ಸಂಗಮೇಶ ಇತರರು ದಾಳಿಯಲ್ಲಿದ್ದರು.