ಜಿಲ್ಲೆ

ತಂಬಾಕು ಬೆಳೆಗಾರನ ಏಕಾಂಗಿ ಪ್ರತಿಭಟನೆ

ಮೈಸೂರು: 2020-21ನೇ ಸಾಲಿನ ತಂಬಾಕು ಬೆಳೆಗೆ 200ರಿಂದ 250 ರೂಪಾಯಿ ಬೆಂಬಲ ಬೆಲೆ ನೀಡುವಂತೆ ಮತ್ತು ಕಾರ್ಡ್‌ದಾರರ ಸಂಖ್ಯೆಗಳನ್ನು ಅತಿ ಜರೂರಾಗಿ ಬಗೆಹರಿಸಿಕೊಡುವಂತೆ ಒತ್ತಾಯಿಸಿ ಪಿರಿಯಾಪಟ್ಟಣ ತಾಲೂಕು ರಾವಂದೂರು ಹೋಬಳಿಯ ಆರ್.ತುಂಗಾ ಗ್ರಾಮದ ಶ್ರೀನಿವಾಸ್ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.


ಈ ಬಾರಿ ತಂಬಾಕಿಗೆ ಉತ್ತಮವಾದ ಅಂದರೆ 200ರೂ ನಿಂದ 250ರೂ.ಗಳ ಬೆಂಬಲ ಬೆಲೆ ದೊರೆಯದ ಕಾರಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಂಬಾಕು ಹರಾಜು ಮಾರುಕಟ್ಟೆ ಕೆಲವು ದಿನಗಳಿಂದ ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದಾರೆ ಎಂದರು.


ತಂಬಾಕು ಬೆಳೆಯನ್ನು ಬೆಳೆಯಲು ಪ್ರತಿ ಕೆಜಿಗೆ ಸುಮಾರು 195ದಿಂದ 215 ರೂ.ಗಳು ಖರ್ಚಾಗುತ್ತಿದ್ದು ತಂಬಾಕು ಮಾರುಕಟ್ಟೆ ನೀಡುತ್ತಿರುವ ಬೆಲೆ ಸುಮಾರು 130ರಿಂದ 170 ರೂಗಳು ಮಾತ್ರ. ರೈತರು ಮಾಡುತ್ತಿರುವ ಖರ್ಚು ಕೂಡ ಸಿಗದೆ ನಷ್ಟವನ್ನು ಹೊಂದುತ್ತಿದ್ದಾರೆ. ಆದ್ದರಿಂದ ತಂಬಾಕಿನ ಬೆಲೆಯನ್ನು ಕನಿಷ್ಟ ಸುಮಾರು 200ರಿಂದ 250 ರೂ.ಗಳನ್ನು ನೀಡಿ ಮಾರಕಟ್ಟೆಯನ್ನು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿದರು.