ಜಿಲ್ಲೆ

ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳಿ

ಬಳ್ಳಾರಿ : ಇಂಧನ ವಸ್ತುಗಳ ಬಳಕೆಯಲ್ಲಿ ಅವುಗಳ ಕಾರ್ಯ ಮತ್ತು ತಂತ್ರಜ್ಞಾನವು ಅರಿತುಕೊಳ್ಳಬೇಕು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ ರವೀಂದ್ರನಾಥ ಎಸ್. ಬಳ್ಳಿ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಶಿಎನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಹಯೋಗದೊಂದಿಗೆ ಪಂಪ್, ಉಪಕರಣ ತಂತ್ರಜ್ಞರಿಗೆ ಇಂಧನ ದಕ್ಷತಾ ಕಾರ್ಯಗಾರ ಕುರಿತು ನಡೆದ ಒಂದು ದಿನದ ತಾಂತ್ರಿಕ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಕಾರ್ಯಾಗಾರದ ಉಪಯೋಗ ಪಡೆದು, ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು. ತರಬೇತುದಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ತರಬೇತಿ ಅಧಿಕಾರಿಗಳಾದ ವೆಂಕಟೇಶ.ಟಿ, ಚಂದ್ರಶೇಖರ ರೆಡ್ಡಿ, ಗೊಂವಿದಪ್ಪ, ಟಿ.ಚೆನ್ನಬಸವ, ಶ್ರೀನಿವಾಸುಲು, ಎಚ್.ಎಂ.ಇಂದಿರ, ಎಚ್.ಚಂದ್ರಿಕ ಇದ್ದರು.