ಜಿಲ್ಲೆ

ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಿ

ಕಲಬುರಗಿ: ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಅಭಿವೃದ್ಧಿ ಜತೆಗೆ ಕೌಶಲಕ್ಕೆ ಆದ್ಯತೆ ನೀಡಿ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕು ಎಂದು ಮೆಹ್ತಾ ಡಿಜಿಟಲ್ ವೆಂಚರ್ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಸಾರಂಗ ಮೆಹ್ತಾ ಸಲಹೆ ನೀಡಿದರು.
ನಗರದ ಚಂದ್ರಕಾAತ ಪಾಟೀಲ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೌಶಲ ಆಧಾರಿತ ವಿಸ್ತÈತ ಜ್ಞಾನ ಸಂಪಾದಿಸಿದವರಿಗೆ ಅಪಾರ ಅವಕಾಶಗಳಿವೆ ಎಂದು ಮನವರಿಕೆ ಮಾಡಿದರು.
ಆಧುನಿಕ ಜಗತ್ತು ಹೊಸ ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆಯುತ್ತಿದೆ. ತಂತ್ರಜ್ಞಾನ ದಿನೇ ದಿನೆ ಹೊಸ ರೂಪದಲ್ಲಿ ಹೊರ ಬರುತ್ತಿದೆ. ಅದರ ಸದುಪಯೋಗ ಪಡೆದುಕೊಂಡು ವಾಣಿಜ್ಯ, ವ್ಯಾಪಾರ ಹಾಗೂ ಕೈಗಾರಿಕೋದ್ಯಮದಲ್ಲಿ ಯುವಕರು ತೊಡಗಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಆರ್.ಕೃಷ್ಣ ಮೂರ್ತಿ ಮಾತನಾಡಿ, ಟ್ಯಾಲಿಯಂತಹ ತಂತ್ರಜ್ಞಾನ ಅಧ್ಯಯನ ಮಾಡುವುದರಿಂದ ದೇಶ ವಿದೇಶಗಳಲ್ಲೂ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು. ಉಪನ್ಯಾಸಕ ಸಂತೋಷ ಹತ್ತಿಗೌಡರ ಟ್ಯಾಲಿ ಬಗ್ಗೆ ವಿವರಿಸಿದರು. ಉಪನ್ಯಾಸಕ ಮಹಾಂತೇಶ ಒಡೆಯರ್, ಜಗದೀಶ, ಜ್ಯೋತಿ, ರಾಹುಲ್, ಕುಮಾರ, ರಾಜಲಕ್ಷಿö್ಮÃ, ಲಕ್ಷಿö್ಮÃ ಅಂಗಡಿ ಇತರರಿದ್ದರು.
ಅದಿತಿ ಮೆಹ್ತಾ ನಿರೂಪಣೆ ಮಾಡಿದರು. ಉಪನ್ಯಾಸಕ ಅನೀಲಕುಮಾರ ವಂದಿಸಿದರು.