ಜಿಲ್ಲೆ

ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳಿ: ಗಿರಿಧರ್ ರಾವ್

ಮೈಸೂರು: ಆಧುನೀಕ ದಿನಗಳಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸುಲಭವಾಗಿ ಜ್ಞಾನ ಹೆಚ್ಚಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ಎಂ.ಎಸ್.ಗಿರಿಧರ್ ರಾವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಮಹಾರಾಣಿ ಪದವಿ ಮತ್ತು ಸ್ನಾತಕೋತ್ತರ ಕಲಾ ಕಾಲೇಜಿನ ಗಂಥ್ರಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಗ್ರಂಥಾಲಯ ವೆಬ್‌ಸೈಟ್ ಅನಾವರಣ ಮಾಡಿ ಅವರು ಮಾತನಾಡಿದರು.
ತಂತ್ರಜ್ಞಾನ ಬೆಳವಣಿಗೆಯಿಂದ ಕುಳಿತಲ್ಲಿಯೇ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು. ಗ್ರಂಥಾಲಯ ವ್ಯವಸ್ಥೆಯೂ ಈಗ ಡಿಜಿಟಲೀಕರಣಗೊಂಡಿದ್ದು, ಅಗತ್ಯ ಪುಸ್ತಕಗಳು ಅನ್‌ಲೈನ್‌ನಲ್ಲಿಯೇ ನೋಡಬಹುದು. ಇಂತಹ ಗ್ರಂಥಾಲಯ ಡಿಜಿಟಲೀಕರಣ, ವೆಬ್‌ಸೈಟ್‌ಅನ್ನು ಮಹಾರಾಣಿ ಕಾಲೇಜು ರೂಪಿಸಿಕೊಂಡಿರುವುದು ಸ್ವಾಗತಾರ್ಹ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಮಾತನಾಡಿದರು. ಕಾಲೇಜಿನ ಹಿರಿಯ ಗ್ರಂಥಪಾಲಕಿ ಡಾ.ಬಿ.ಪ್ರಮೋದಿನಿ, ಐಕ್ಯೂಎಎಸ್‌ನ ಸಂಚಾಲಕಿ ಡಾ.ಬಿ.ಪಿ.ಅಶ್ವಿನಿ ಇದ್ದರು.