ಚನ್ನಮ್ಮ ಕಿತ್ತೂರು: ಹಳೇ ಕೃಷಿ ಪದ್ಧತಿ ಬದಿಗಿಟ್ಟು ತಂತ್ರಜ್ಞಾನ ಅಳವಡಿಕೆಯಿಂದ ಹೆಚ್ಚಿನ ಆದಾಯವನ್ನು ರೈತರು ನಿರೀಕ್ಷಿಸಬಹುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಪಟ್ಟಣದ ವೀರಭದ್ರೇಶ್ವರ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ರೈತ ಉತ್ಪಾದಕ ಸಂಸ್ಥೆ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ನೂರಾರು ಕಂಪನಿಗಳು ರೈತರ ಆದಾಯ ಹೆಚ್ಚಿಸುವ ಯೋಜನೆ ರೂಪಿಸುತ್ತವೆ. ಆದರೆ, ರೈತರು ಮತ್ತು ಕಂಪನಿ ನಡುವಿನ ಸಂಬಂಧ ಬರುಬರುತ್ತ ಕ್ಷೀಣಿಸುತ್ತದೆ. ಇದು ಆಗಕೂಡದು, ರೈತರ ಆದಾಯ ಹೆಚ್ಚಿಸುವ ಪ್ರತಿ ಕಾರ್ಯಕ್ಕೆ ಬೆಂಬಲ ಇದೆ ಎಂದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಗುರುರಾಜ ಮಾಳೆಕೊಪ್ಪ, ರಾಜೇಂದ್ರ ಇನಾಮದಾದ, ಅಶೋಕ ಮಾಳಗಿ, ವಿಶಾಲ ಕೊಡತೆ, ಶಶಿಕಾಂತ ಭೋಜೆ, ಪ್ರಭಾಕರ ಹಂಚಿನಾಳ, ಮಡಿವಾಳಪ್ಪ ಗುದಗಿ, ಅನೀತಾ ಕಟಾರೆ ಇತರರು ಇದ್ದರು.