ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ 
ಜಿಲ್ಲೆ

ಡ್ರೈವ್ ಸೇಫ್ಟಿ-ಪೂನಾ ಡ್ರೈವ್-೨೦೨೫

ಚಿಕ್ಕಮಗಳೂರು: ಸಾರ್ವಜನಿಕರಲ್ಲಿ ಸುರಕ್ಷತಾ ವಾಹನ ಚಾಲನೆಯ ಬಗ್ಗೆ ಅರಿವು ಮೂಡಿಸಲು ಡ್ರೈವ್ ಸೇಫ್ಟಿ-ಪೂನಾ ಡ್ರೈವ್-೨೦೨೫ ನ್ನು ಸೆ.೩ ರಿಂದ ೭ ರವರೆಗೆ ಏರ್ಪಡಿಸಲಾಗಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕಾಫಿಲ್ಯಾಂಡ್ ಪ್ರಸ್ತುತ ೨೫ ವರ್ಷಗಳನ್ನು ಪೂರೈಸಿದ್ದು, ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ರೋಟರಿ ರಸ್ತೆ ಸುರಕ್ಷತಾ ಜಾಥಾ ಜಿಲ್ಲಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸುಮಾರು ೨೫೦೦ ಕಿ.ಮೀ ಗಳನ್ನು ಪೂರ್ಣಗೊಳಿಸಲು ರೋಟರಿ ಕ್ಲಬ್‌ನ ೨೫ ಸದಸ್ಯರು ೬ ವಾಹನಗಳಲ್ಲಿ ಸಂಚರಿಸಿ ಯಶಸ್ವಿಗೊಳಿಸಲಿದ್ದಾರೆ ಎಂದರು.

ಸೆ. ೩ರ ಮುಂಜಾನೆ ೫ ಗಂಟೆಗೆ ಚಿಕ್ಕಮಗಳೂರಿನಿಂದ ಹೊರಟು ಚಿತ್ರದುರ್ಗ, ಹೊಸಪೇಟೆ, ವಿಜಯಪುರ, ಶಿರಡಿ, ಪೂನಾ ತಲುಪಿ ಸತಾರಾ-ಬೆಳಗಾವಿ ಮಾರ್ಗವಾಗಿ ಸೆ.೭ ರಂದು ಸಂಜೆ ಚಿಕ್ಕಮಗಳೂರು ನಗರವನ್ನು ತಲುಪಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾರ್ಗದುದ್ದಕ್ಕೂ ರೋಟರಿ ಕ್ಲಬ್‌ಗಳ ಯೋಜನೆಯ ಉz್ದೆÃಶಗಳನ್ನು ವಿನಿಮಯ ಮಾಡಿಕೊಳ್ಳುವುದಲ್ಲದೆ ಸಾರ್ವಜನಿಕರಿಗೆ ರೋಟರಿ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಚಾರ ವಿನಿಮಯ ಮಾಡಿಕೊಡಲಾಗುತ್ತದೆ ಎಂದರು.

ರೋಟರಿ ಜಿಲ್ಲೆಯ ಮತ್ತೊಂದು ಪ್ರತಿಷ್ಠಿತ ಕಾರ್ಯಕ್ರಮವಾದ ಪರಿಸರ ರಕ್ಷಣೆಯ ಜಾಗೃತಿಗಾಗಿ ವಿವಿಧ ರೀತಿಯ ಅರಣ್ಯ ಬೀಜಗಳನ್ನು ಸೀಡ್‌ಬಾಲ್‌ಗಳಾಗಿ ಪರಿವರ್ತಿಸಿ ಸಾರ್ವಜನಿಕರೊಂದಿಗೆ ಕ್ಲಬ್‌ನ ಸದಸ್ಯರು ಆಯಕಟ್ಟಿನ ಜಾಗಗಳಲ್ಲಿ ಬಿತ್ತರಿಸಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ವಿಚಾರ ಗೋಷ್ಠಿಗಳನ್ನು ನಡೆಸಲಾಗುವುದು ಎಂದರು.

ಎAಎಲ್‌ವಿ ರೋಟರಿ ಹಾಲ್‌ನಲ್ಲಿ ಸೆ. ೨ರಂದು ಸಂಜೆ ೪.೩೦ ಕ್ಕೆ ಈ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಜಿಲ್ಲಾ ರೋಟರಿ ರಾಜ್ಯಪಾಲ ರೊಟೇರಿಯನ್ ಪಾಲಾಕ್ಷ.ಕೆ, ರೊಟೇರಿಯನ್ ಪ್ರವೀಣ್ ನಹರ್ ಟಿ.ಎಂ, ಸಹಾಯಕ ಗವರ್ನರ್ ಮಂಜುನಾಥ್ ಹೆಚ್.ಕೆ, ವಲಯ ಸೇನಾನಿ-ವಲಯ ಸೆವೆನ್ ಹಾಗೂ ರೋಟರಿ ಕಾಫಿಲ್ಯಾಂಡ್ ಸಮ್ಮುಖದಲ್ಲಿ ಫ್ಲಾಗ್‌ಆಫ್ ಮಾಡಲಾಗುವುದು ಎಂದು ತಿಳಿಸಿದರು.

ಅಂದು ಸಾಂಕೇತಿಕವಾಗಿ ಕಡಿಮೆ ದರದಲ್ಲಿ ಹೆಲ್ಮೆಟ್‌ಗಳನ್ನು ಆಜಾದ್ ವೃತ್ತದಲ್ಲಿ ವಿತರಿಸುವುದರೊಂದಿಗೆ ಉದ್ಘಾಟಿಸಲಿದ್ದು, ಉದ್ಘಾಟನೆ ಭಾಗವಾಗಿ ಸುಮಾರು ೨೫ ವಾಹನಗಳು ನಗರದ ಎಂಎಲ್‌ವಿ ರೋಟರಿ ಹಾಲ್‌ನಿಂದ ಪ್ರಾರಂಭವಾಗಿ, ಆಜಾದ್ ವೃತ್ತ, ಐಜಿ ರಸ್ತೆ, ಎಂಜಿ ರಸ್ತೆ ಮಾರ್ಗವಾಗಿ ಸಂಚರಿಸಿ ಸುರಕ್ಷತಾ ವಾಹನ ಚಾಲನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಯೋಜನಾ ನಿರ್ದೇಶಕ ತನೂಜ್ ಕುಮಾರ್, ಚೇತನ್ ಉಪಸ್ಥಿತರಿದ್ದರು.