ಜಿಲ್ಲೆ

ಡ್ರಾಮಾ ಧಮಾಕಾ ಜ್ಯೂನಿಯರ್ ರಿಯಾಲಿಟಿ ಶೋ ಆಡಿಷನ್ ೪ಕ್ಕೆ

ಕಲಬುರಗಿ: ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಎಸ್‌ಎಸ್‌ವಿ ಟಿವಿ ಡ್ರಾಮಾ ಧಮಾಕಾ ಜ್ಯೂನಿಯರ್ ರಿಯಾಲಿಟಿ ಶೋ ಮೂಲಕ ಸಂಗೀತ, ಮನರಂಜನೆ ಮತ್ತು ಪ್ರತಿಭಾನ್ವೇಷಣೆಗೆ ವೇದಿಕೆ ಕಲ್ಪಿಸುತ್ತಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಂಕರ ಕೋಡ್ಲಾ ಹೇಳಿದರು. ರಿಯಾಲಿಟಿ ಶೋನಲ್ಲಿ ಪ್ರತಿಭಾನ್ವಿತ ೩೬ ಮಕ್ಕಳ ಆಯ್ಕೆ ಮಾಡಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಿರ್ಮಾಪಕರಾದ ಡಾ.ವಿಶ್ವರಾಜ ಪಾಟೀಲ್, ಶಾಂತಲಿAಗಯ್ಯ ಮಠಪತಿ ಮಾತನಾಡಿ, ಆ.೪ರಂದು ಬೆಳಗ್ಗೆ ೯ರಿಂದ ಸಂಜೆ ೫ರವರೆಗೆ ಕುಸನೂರ ರಸ್ತೆಯ ಚಾನೆಲ್ ಕ್ಯಾಂಪಸ್‌ನಲ್ಲಿ ಆಡಿಷನ್ ನಡೆಯಲಿದೆ. ೫ರಿಂದ ೧೫ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಎರಡನೇ ಹಂತದ ಆಡಿಷನ್ ಆ.೧೧ರಂದು ನಡೆಯಲಿದೆ. ಒಂದು ತಂಡದಲ್ಲಿ ೬ರಂತೆ ೬ ತಂಡಗಳಾಗಿ ವಿಂಗಡಿಸಿ ಆರು ಮೆಂಟರ್‌ಗಳನ್ನು ತಂಡಕ್ಕೆ ಒಬ್ಬರಂತೆ ನಿಯೋಜಿಸಲಾಗುವುದು ಎಂದು ಹೇಳಿದರು.